Saturday, June 3, 2023
Homeಕರಾವಳಿಸ್ಯಾಂಡ್ ಬಜಾರ್ ಆ್ಯಪ್’ ನಲ್ಲಿ ಮರಳು ಬುಕ್ಕಿಂಗ್

ಸ್ಯಾಂಡ್ ಬಜಾರ್ ಆ್ಯಪ್’ ನಲ್ಲಿ ಮರಳು ಬುಕ್ಕಿಂಗ್

- Advertisement -


Renault

Renault
Renault

- Advertisement -

ಮಂಗಳೂರು : ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ 13 ಮರಳು ದಿಬ್ಬಗಳನ್ನು ತೆರವುಗೊಳಿಸಿ ಇದುವರೆಗೆ 80 ಮಂದಿಗೆ ತಾತ್ಕಾಲಿಕ ಪರವಾನಿಗೆಯನ್ನು ವಿತರಿಸಲಾಗಿದ್ದು ತೆರವುಗೊಳಿಸಿದ ಮರಳನ್ನು ‘ಸ್ಯಾಂಡ್ ಬಜಾರ್ ಆ್ಯಪ್’ ಮೂಲಕ ಜಿಲ್ಲೆಯ ಪರಿಮಿತಿಯೊಳಗೆ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಮತ್ತು ಇತರೆ ಕಾಮಗಾರಿಗಳಿಗೆ ಮರಳನ್ನು ಪೂರೈಸಲು ನವೆಂಬರ್ 27 ರಿಂದ ಚಾಲನೆ ನೀಡಲಾಗಿದ್ದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು, ಗ್ರಾಹಕರು ‘ಸ್ಯಾಂಡ್ ಬಜಾರ್ ಆ್ಯಪ್’ ನಲ್ಲಿ ಬುಕ್ ಮಾಡಿ ಮರಳನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, 1ನೇ ಮಹಡಿ, ಜುಗುಲ್ ಬಿಲ್ಡಿಂಗ್, ಮಲ್ಲಿಕಟ್ಟೆ, ಮಂಗಳೂರು-575002’ ಅಥವಾ ಮೊ.ಸಂ: 6366876888 ನ್ನು ಸಂಪರ್ಕಿಸಬಹುದಾಗಿದೆ ಎಂದು ಮರಳು ಸಮಿತಿಯ ಉಪನಿರ್ದೇಶಕರು ಹಾಗೂ ಅನುಷ್ಠಾನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments