Tuesday, September 27, 2022
Homeಕರಾವಳಿಮಂಗಳೂರು ಪೊಲೀಸರಿಂದ ಮಹಿಳೆಯರ ಸುರಕ್ಷತೆಗಾಗಿ ಜಾಗೃತಿ ಅಭಿಯಾನ… ...

ಮಂಗಳೂರು ಪೊಲೀಸರಿಂದ ಮಹಿಳೆಯರ ಸುರಕ್ಷತೆಗಾಗಿ ಜಾಗೃತಿ ಅಭಿಯಾನ… 112 ಸಂಖ್ಯೆಗೆ ಕರೆ ಮಾಡಿದರೆ ಸ್ಥಳಕ್ಕೆ ಖಾಕಿಯ ಎಂಟ್ರಿ…

- Advertisement -
Renault

Renault

Renault

Renault






- Advertisement -

ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳಾ ಸುರಕ್ಷತೆಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’ ಜಾಗೃತಿ ಅಭಿಯಾನ ನಡೆಯಿತು.

‘112ಕ್ಕೆ ಕರೆ ನಿಮ್ಮಿಂದ-ನೀವಿರುವಲ್ಲಿಗೆ ಭೇಟಿ ನಮ್ಮಿಂದ’ ಎಂಬ ಪರಿಕಲ್ಪನೆಯಲ್ಲಿ ಈ ಅಭಿಯಾನ ನಡೆಸಲಾಯಿತು. ಮೈಸೂರು ಗ್ಯಾಂಗ್ ರೇಪ್ ಘಟನೆ ಬಳಿಕ ಹೈ ಅಲರ್ಟ್ ಆದ ಮಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತೆಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ERSS ವೆಹಿಕಲ್ ಹೆಚ್ಚಿನ ಬಳಕೆ ಮಾಡುವಂತೆ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಯಿತು. ನಗರದ ಪೊಲೀಸ್ ಕಮಿಷನರ್ ಕಚೇರಿ ಬಳಿ ಇ.ಅರ್.ಎಸ್.ಎಸ್ ವಾಹನಕ್ಕೆ ಒಲಿಂಪಿಯನ್ ಎಂ.ಆರ್ ಪೂವಮ್ಮ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಆರ್ ಪೂವಮ್ಮ, ಮಂಗಳೂರು ನಗರ ಪೊಲೀಸರು ಆಯೋಜಿಸಿರುವ ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮ ಮಹಿಳೆಯರಲ್ಲಿ ಧೈರ್ಯ ತುಂಬುವ ಪ್ರಕ್ರಿಯೆಯಾಗಿದೆ. ಅದರಲ್ಲೂ ಸಾಮಾನ್ಯ ಮಹಿಳೆಯರಿಗೆ ಅವರ ಉದ್ಯೋಗ, ಶಿಕ್ಷಣ ಮಾತ್ರವಲ್ಲದೆ ಮನೆಗಳಲ್ಲಿಯೂ ಸುರಕ್ಷತೆಯ ಭರವಸೆಯನ್ನು ನೀಡುವಲ್ಲಿ ಈ ಸಹಾಯವಾಣಿ ಉಪಯುಕ್ತ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಒಲಿಂಪಿಯನ್ ಸ್ಪರ್ಧಿ ಎಮ್.ಆರ್.ಪೂವಮ್ಮ ಹಾಗೂ ಅವರ ತಾಯಿ ಜಾನಕಿ ಉಪಸ್ಥಿತಿಯಲ್ಲಿ ನಗರದ ಅಥೆನಾ ಆಸ್ಪತ್ರೆಯಲ್ಲಿ ಇಆರ್ ಎಸ್ ಎಸ್-122 ಸಹಾಯವಾಣಿ ಕಾರ್ಯಾಚರಣೆ ಕುರಿತು ಅಣುಕು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಮಿಷನರ್ ಎನ್.ಶಶಿಕುಮಾರ್, ಯಾವುದೇ ತುರ್ತು ಸಂದರ್ಭಗಳಲ್ಲಿ ಮಹಿಳೆಯರಾಗಲೀ ಅಥವಾ ಇತರ ಯಾರೇ ಆಗಲಿ 112 ಗೆ ಕರೆ ಮಾಡಿದಾಗ ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಠಾಣೆಯ ಪೊಲೀಸರು ಕನಿಷ್ಠ 5 ರಿಂದ 10 ನಿಮಿಷಗಳಲ್ಲಿ ಹಾಗೂ ಹೊರವಲಯದಲ್ಲಿದ್ದರೆ 15 ನಿಮಿಷಗಳೊಳಗೆ ಘಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ನಿವಾರಿಸಲಿದ್ದಾರೆ ಎಂದು ತಿಳಿಸಿದರು.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments