ಮಣಿಪಾಲ : ತಡರಾತ್ರಿಯ ವೇಳೆಯಲ್ಲಿ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಯುವಕರಿಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರರನ್ನು ಪರ್ಕಳದ ವಿವೇಕಾನಂದ ಕಾಮತ್ ( 27 ವರ್ಷ), ಪರ್ಕಳ ಮಾರುತಿ ನಗರದ ಧನಂಜಯ (26 ವರ್ಷ) ಎಂದು ಗುರುತಿಸಲಾಗಿದೆ. ನಸುಕಿನ ವೇಳೆ 1.30ರ ಸುಮಾರಿಗೆ ಸ್ಕೂಟರ್ ನಲ್ಲಿ ಮಣಿಪಾಲ ಕಾಲೇಜಿನ ವಿದ್ಯಾರ್ಥಿಯ ಜೊತೆಗೆ ವಿದ್ಯಾರ್ಥಿನಿ ತೆರಳುತ್ತಿದ್ದಳು. ಈ ವೇಳೆಯಲ್ಲಿ ಸ್ಕೂಟರ್ ಅಡ್ಡಗಟ್ಟಿದ ಆರೋಪಿಗಳು ವಿದ್ಯಾರ್ಥಿನಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿನಿ ಮಣಿಪಾಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾಳೆ.
ರಾತ್ರಿ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ರಾತ್ರಿ ವೇಳೆಯಲ್ಲಿ ಓಡಾಡುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಚ್ಚರಿಕೆಯಿಂದ ಇರುವಂತೆ ಎಸ್ಪಿ ವಿಷ್ಣುವರ್ಧನ್ ಸೂಚಿಸಿದ್ದಾರೆ.
ರಾತ್ರಿ ಒಂದು ಗಂಟೆಗೆ ವಿದ್ಯಾರ್ಥಿನಿ ಅದೇನು ಕೊತ್ತಿಮಿರಿ ಸೊಪ್ಪು ತರೋಕೆ ಹೋಗ್ತಿದ್ಳಾ ಹುಡುಗರೊಟ್ಟಿಗೆ…!!!???
ಇಲ್ಲಿ ಕಥೆ ಬೇರೇನೋ ಇದೆ.
ಮಧ್ಯರಾತ್ರಿಯಲ್ಲಿ ಹುಡುಗಿ ಹುಡುಗನೊಂದಿಗೆ ಅಲೆದಾಡುವ ಉದ್ದೇಶವಾದರೂ ಏನು????