Sunday, May 28, 2023
Homeಕರಾವಳಿ23 ಪ್ರಕರಣ! ಮೋಸ್ಟ್ ವಾಂಟೆಡ್ ಅಜರುದ್ದೀನ್ ಕೊನೆಗೂ ಬಂಧನ

23 ಪ್ರಕರಣ! ಮೋಸ್ಟ್ ವಾಂಟೆಡ್ ಅಜರುದ್ದೀನ್ ಕೊನೆಗೂ ಬಂಧನ

- Advertisement -


Renault

Renault
Renault

- Advertisement -

ಮಂಗಳೂರು: 23 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅಜರುದ್ದೀನ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್​ನ ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ನಿವಾಸಿ ಅಜರುದ್ದೀನ್ ಯಾನೆ ಅಜರ್ ಯಾನೆ ನಾಥು (29) ಬಂಧಿತ. ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ. ಜಾಮೀನು ರಹಿತ ವಾರೆಂಟ್​ ಕೂಡ ಇತ್ತು.

ಮಂಗಳೂರು ಪೊಲೀಸ್​ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತ ಮನೋಜ್‌ ಕುಮಾರ್‌ ನಿರ್ದೇಶನದಂತೆ ಬುಧವಾರ ಸುರತ್ಕಲ್ ಪೊಲೀಸ್​ ಠಾಣೆಯ ನಿರೀಕ್ಷಕ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ಪೊಲೀಸ್​ ಉಪ ನಿರೀಕ್ಷಕ ಮಲ್ಲಿಕಾರ್ಜುನ್‌ ಹಾಗೂ ಸಿಬ್ಬಂದಿ ಅಜಿತ್ ಮ್ಯಾಥ್, ಮಣಿಕಂಠ, ಕಾರ್ತಿಕ್ ಅವರ ತಂಡ ಆರೋಪಿಯನ್ನು ಸೆರೆಹಿಡಿದಿದೆ.

ಅಜರುದ್ದೀನ್ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 4, ಬಜ್ಪೆ ಪೊಲೀಸ್ ಠಾಣೆಯಲ್ಲಿ 2, ಬರ್ಕೆ ಪೊಲೀಸ್ ಠಾಣೆಯಲ್ಲಿ 3, ಕೋಣಾಜೆ ಪೊಲೀಸ್ ಠಾಣೆಯಲ್ಲಿ 3, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 1, ವಿಟ್ಲ ಪೊಲೀಸ್ ಠಾಣೆಯಲ್ಲಿ 1, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 1, ಕಾಪು ಪೊಲೀಸ್ ಠಾಣೆಯಲ್ಲಿ 1, ಮಣಿಪಾಲ ಪೊಲೀಸ್ ಠಾಣೆಯಲ್ಲಿ 1, ಮಲ್ಪೆ ಪೊಲೀಸ್ ಠಾಣೆಯಲ್ಲಿ 1, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments