- Advertisement -
ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿ ಅಲೆಗೆ ಸಿಕ್ಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ಭಾನುವಾರ ರಕ್ಷಣೆ ಮಾಡಿದ್ದಾರೆ.
ಬೆಂಗಳೂರು ಕತ್ರೆಗುಪ್ಪೆಯಿಂದ ಮುರ್ಡೆಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ವಿ.ಸಂಜಯ (18), ವಿ.ಸಂಜನಾ (15) ಹಾಗೂ ಕಾಂದಲಮ್ಮಾ(40) ಅಪಾಯದಿಂದ ಪಾರಾದವರು.
ಬೆಳಿಗ್ಗೆ ಅವರು ಸಮುದ್ರಕ್ಕೆ ಈಜಲು ಹೋಗಿದ್ದರು. ಪ್ರವಾಸಿರು ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಓಸಿಯನ್ ಅಡ್ವಂಚರ್ಸ್ ಸಿಬ್ಬಂದಿ ಹಾಗೂ ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.