ಮಂಗಳೂರು: ಇಂದು ಬೆಳಗ್ಗೆ ಮಂಗಳೂರಿನ ಯೇನಪೋಯ, ಎ.ಜೆ. ಶೆಟ್ಟಿ, ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ಮಾಲೀಕರ ಕಚೇರಿ ಹಾಗೂ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು, ಇದರಲ್ಲಿ ಎ.ಜೆ.ಶೆಟ್ಟಿಯವರ ಮನೆ ಮೇಲೆ ದಾಳಿ ನಡೆದಾಗ ಅಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕ ಹಣ ಕೇಳಿದ್ರೆ ಎಂತವರೂ ಒಮ್ಮೆ ದಂಗಾಗುವುದು ಗ್ಯಾರಂಟಿ. ಹೌದು ಎ.ಜೆ.ಶೆಟ್ಟಿಯವರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದಾಗ ಅದರಲ್ಲಿ ಅವರಿಗೆ ಸಂಬಂಧಿಸಿದ ಸುಮಾರು 5 ಕೋಟಿ ಹಣ ಪತ್ತೆಯಾಗಿರುವುದು ಕಂಡುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಉಳಿದಂತೆ ಅಧಿಕಾರಿಗಳು ಮಾಹಿತಿಯನ್ನ ಸಂಗ್ರಹಿಸುತ್ತಿದ್ದು, ಇನ್ನೆಷ್ಟು ಅನಧಿಕೃತ ಅದಾಯ ಮೂಲಗಳು ಇವೆ ಎಂಬುದರ ಮಾಹಿತಿ ತಿಳಿದುಬರಬೇಕಿದೆ.