80 ಕೋಟಿ ಜನರಿಗೆ 2 ತಿಂಗಳು ಉಚಿತ ರೇಷನ್ :
ಪ್ರಧಾನಿ ಮೋದಿ ಘೋಷಣೆ
ದೀರ್ಘ ಕಾಲದ ಲಾಕ್ ಡೌನ್ ಸಾದ್ಯತೆ ತೆರೆದಿಟ್ಟ ಕೇಂದ್ರ ಸರ್ಕಾರದ ದಿಡೀರ್ ಘೋಷಣೆ
ನವದೆಹಲಿ:ದೇಶದಲ್ಲಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೆಲವು ರಾಜ್ಯಗಳಲ್ಲಿ ಮತ್ತೆ ಲಾಕ್ ಡೌನ್, ವಾರಾಂತ್ಯ ಕರ್ಫ್ಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.ಬಡವರ ಕೂಲಿಕಾರರ ಬದುಕು ಮತ್ತೆ ಕಂಗಾಲಾಗುವ ಮುನ್ಸೂಚನೆ ಇದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರಿಗೆ ಕೇಂದ್ರ ಸರ್ಕಾರವು ಮುಂದಿನ ಎರಡು ತಿಂಗಳು (ಮೇ ಮತ್ತು ಜೂನ್) ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯವನ್ನು ಒದಗಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು.ಇದನ್ನು “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ” ಅಡಿಯಲ್ಲಿ ಅನುಕೂಲ ಮಾಡಿಕೊಡಲಾಗುವುದು. ಯೋಜನೆಯ ಪ್ರಕಾರ, ಕೇಂದ್ರವು 80 ಕೋಟಿ ಫಲಾನುಭವಿಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯವನ್ನು ಒದಗಿಸಲಿದೆ. ಇದಕ್ಕಾಗಿ ೨೬,೦೦೦ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.ಈಗ ದೇಶವು ಕೋವಿಡ್-19 ರ ಎರಡನೇ ಅಲೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಬಡವರು ಕೆಲಸ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಬಡವರಿಗೆ ಪೌಷ್ಠಿಕಾಂಶ ನೀಡುವುದು ಮುಖ್ಯ, ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ (ಎಪ್ರಿಲ್ – ಜೂನ್) ಮೂರು ತಿಂಗಳು ಇದೇ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸಿತ್ತು ಎಂಬುದು ಉಲ್ಲೇಖನೀಯ.
Plz help middle class people mang me kha Nahi sakte mange Bina ji Nahi sakte