Sunday, June 4, 2023
Homeಕರಾವಳಿ9ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಪೂರ್ವಭಾವಿ ಸಭೆ...

9ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಪೂರ್ವಭಾವಿ ಸಭೆ…

- Advertisement -


Renault

Renault
Renault

- Advertisement -

ಬಂಟ್ವಾಳ: ಸಜೀಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಇದೇ ಬರುವ ಮಾರ್ಚ್ 3, 4, 5 ಮೂರು ದಿನಗಳಲ್ಲಿ ನಡೆಯಲಿರುವ 9 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆಯ್ಯದ್ ಮುಸ್ತಾಖು ರಹ್ಮಾನ್ ತಂಞಲ್ ರ ನೇತೃತ್ವದಲ್ಲಿ ನಡೆಯಿತು.
ಚಟ್ಟೆಕಲ್ ಜುಮ್ಮಾ ಮಸೀದಿಯ ಬೃಹತ್ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ 3 ದಿನಗಳ ಕಾಲ ನಡೆಯಲಿದ್ದು, ಮಾ.3 ರಂದು ಜಿಸ್ತಿಯಾ ಖುತಿಬಿಯ್ಯತ್ ನೇತೃತ್ವ, ಮುಹಮ್ಮದಲಿ ಮದನಿ ಕಲ್ಚರ ಕೋಯಿಕ್ಕೊಡ್, ಮಾ.4 ರಂದು ಬುರ್ದಾ ಮಜ್ಲಿಸ್ ನೇತೃತ್ವ, ಸ್ವಾದಿಖಲಿ ಫಾಳಿಲಿ ಗೂಡಗಲ್ಲೂರು, ನಾಸಿಫ್ ಕ್ಯಾಲಿಕಟ್ ಹಾಗೂ ಮಾ.05 ರಂದು ಜಲಾಲಿಯ್ಯ ರಾತೀಬ್ ನೇತೃತ್ವ, ಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಚಟ್ಟೆಕಲ್ ಹಾಗೂ ಪ್ರಭಾಷಣ ಡಾ. ಫಾರೂಕ್ ನಈಮಿ ಕೊಲ್ಲಂ ರವರು ಮಾಡಲಿದ್ದು, ಇತರ ಸೈಯ್ಯದರು, ಧಾರ್ಮಿಕ ಮತಪಂಡಿತರು, ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಲಾಲಿಯ್ಯ ಜುಮ್ಮಾ ಮಸೀದಿ ಚಟ್ಟೆಕಲ್ ಇದರ ಆಡಳಿತ ಕಮೀಟಿಯವರು ತಿಳಿಸಿದ್ದಾರೆ.

ಜಲಾಲಿಯಾ ರಾತೀಬ್ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸ್ವಾಗತ ಸಮಿತಿಯನ್ನು ರಚಿಲಾಗಿದ್ದು, ಗೌರವಾದ್ಯಕ್ಷ ಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಚಟ್ಟೆಕಲ್, ಅಧ್ಯಕ್ಷರು ಕರೀಂ ಬೊಳ್ಳಾಯಿ, ಉಪಾಧ್ಯಕ್ಷರು ಟಿ.ಕೆ. ಸಹದಿ ಕಯ್ಯೂರು, ಅಬ್ಬಾಸ್ ಹಾಜಿ ಕುಕ್ಕಾಜೆ, ಅಬ್ದುಲ್ ಅಝೀಝ್ ಕಾಪಿಕಾಡ್, ಕನ್ವೀನರ್‍ ಝೂಬೈರ್ ಕೊಳಕೆ, ಉಪ ಕನ್ವೀನರ್: ಹನೀಫ್ ಮುಸ್ಲಿಯಾರ್ ವಲವೂರು ಆಗಿ ನೇಮಿಸಲಾಗಿದೆ.


ಪ್ರಚಾರ ಸಮಿತಿಯ ಸದಸ್ಯರುಗಳಾಗಿ ಸಫ್ವಾನ್ ಕಾಪಿಕ್ಕಾಡ್, ರಫೀಕ್ ಮದನಿ, ಹಂಝ ಪಾಳಿಲಿ ಬಾಳೆಪುಣಿ, ಇರ್ಷಾದ್, ನೌಪಾಲ್ ನಾಡಾಜೆ, ಸಿರಾಜ್ ಕೊಳಕೆ, ಅನ್ಸಾರ್, ಸಲಾಂ ಕಾರಾಜೆ, ಜಬ್ಬಾರ್, ಸಿದ್ದೀಕ್ ಕುಕ್ಕಾಜೆ, ಮೌಸೂಪ್ ರಂಗೇಲು, ಮಜೀದ್ ಸಖಾಪಿ ಮೆಲ್ಕಾರ್, ರಝಾಕ್ ಸಖಾಪಿ ತೆಕ್ಕಾರ್ ಉಪ್ಪಿನಂಗಡಿ, ಟಿ.ಕೆ. ಸಹದಿ ಮಂಚಿ ಕಯ್ಯೂರು, ಅಬ್ದುಲ್ ರಹಿಮಾನ್ ಸಖಾಪಿ ಮುಡಿಪು ರಪೀಕ್ ಕುಕ್ಕಿಲ ಬೊಳ್ಳಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಸಜೀಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಇದೇ ಬರುವ ಮಾರ್ಚ್ 3, 4, 5 ಮೂರು ದಿನಗಳಲ್ಲಿ ನಡೆಯಲಿರುವ 9 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾರ್ದಿಕವಾಗಿ ಸ್ವಾಗತವನ್ನು ಕೋರಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments