
ಮಂಗಳೂರುಃ ನಗರದಲ್ಲಿ ಒಳಚರಂಡಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಪರಿಹಾರಿಸುವಂತೆ ಒತ್ತಾಯಿಸಿ ಇಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ ಕೆ. ಸಂತೋಷ್ ಕಾಮತ್ ನೇತೃತ್ವದಲ್ಲಿ ಪಕ್ಷದ ನಿಯೋಗ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ಸಂವಾದ ನಡೆಸಲಾಯಿತು.
ಮಂಗಳೂರು ನಗರದ ಬಿಜೈ – ಆನೆಗುಂಡಿ ಪ್ರದೇಶದಲ್ಲಿ ಒಳಚರಂಡಿ(ಯುಜಿಡಿ) ಸಮಸ್ಯೆ ಹಲವಾರು ವರ್ಷಗಳಿಂದ ಪರಿಹಾರವಾಗದೆ ಸ್ಥಳೀಯರಿಗೆ ದುರ್ನಾತ ಮಾತ್ರವಲ್ಲೆದ ಆರೋಗ್ಯ ಸಮಸ್ಯೆಗೂ ಕಾರಣವಾಗಿತ್ತು. ಡೆಂಗ್ಯೂ, ಮಲೇರಿಯಾ, ಚಿಕನಗುನ್ಯ ಕಾಯಿಲೆಗಳು ಈ ಪ್ರದೇಶದಳಲ್ಲಿ ಹೆಚ್ಚಾಗಿತ್ತು. ಸ್ಥಳೀಯ ಕೆಲವು ನಾಗರಿಕರು ಆಮ್ ಆದ್ಮಿ ಪಕ್ಷದ ಮುಖಂಡರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಗಮನ ಸೆಳೆಯಲಾಗಿತ್ತು.

ಬಿಜೈ – ಆನೆಗುಂಡಿ ಪ್ರದೇಶದಲ್ಲಿ ಒಳಚರಂಡಿ ಸಮಸ್ಯೆ ಬಗ್ಗೆ ಅಮ್ ಆದ್ಮಿ ಪಾರ್ಟಿ ವತಿಯಿಂದ ಅ.12ರಂದು ಆಯುಕ್ತರಿಗೆ ಜನರಿಗಾಗುವ ತೊಂದರೆ ಬಗ್ಗೆ ವಿವರಿಸಲಾಗಿತ್ತು. ಒಳಚರಂಡಿಯ ಕೊಳಚೆ ನೀರು ಮಳೆ ನೀರು ಚಂರಡಿಯಲ್ಲಿ ಹರಿದುಹೋಗುತ್ತಿರುವುದು ಸಮಸ್ಯೆಯಾಗಿದೆ. ಅಮ್ ಆದ್ಮಿ ಪಾರ್ಟಿ ವತಿಯಿಂದ ಸಮಸ್ಯೆ ಪರಿಹಾರದ ನಿಟ್ಟಿನಲ್ ನಿರಂತರ ಫಾಲೋ ಅಪ್ ಮಾಡುತ್ತಿದ್ದರೂ ಸಮಸ್ಯೆಯ ಪರಿಹಾರ ಆಗಿರಲಿಲ್ಲ. ಡಿ. 9ರಂದು ಈ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಾಗ ಸಂಬಂಧಪಟ್ಟ ಎಂಜಿನಿಯರಿಗೆ ಕಾರಣಕೇಳಿ ನೊಟೀಸು ನೀಡುವುದಾಗಿ ಮಹಾನಗರಪಾಲಿಕೆಯ ಆಯುಕ್ತರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಪಲಿಕೆಯ ವ್ಯಾಪ್ತಿಯ ಕೆಲರಾಯ್ ಬಡಾವಣೆಯ ದಾರಿ ಸಮಸ್ಯೆಯು ಹಲವು ವರ್ಷಗಳಿಂದ ಪರಿಹಾರ ಆಗಿಲ್ಲ. ಖಾಸಗಿಯವರು ದಾರಿಗೆ ಜಮೀನು ಬಿಡಬೇಕಾಗುವ ಕಾನೂನು ತೊಡಕುಗಳನ್ನು ನಿವಾರಿಸಿದ ನಂತರ ಕೌನ್ಸಿಲ್ ಮೀಟಿಂಗ್ ಅನುಮೋದನೆ ಪಡೆದು ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಅಧಿಕಾರಿಗಳ ಲೋಪ ಪಾಲಿಕೆಗೆ ನಷ್ಟ
ಜೆಪ್ಪು- ಮಜಿಲ- ಪ್ರದೇಶದಲ್ಲಿ ಒಳಚರಂಡಿ(ಯುಜಿಡಿ) ಸಮಸ್ಯೆಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಏಳು ಮಂದಿ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ 2014ರಲ್ಲಿ ದಂಡ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಅಧಿಕಾರಿಗಳು ಮಹಾನಗರಪಾಲಿಕೆಯ ವೆಚ್ಚದಲ್ಲಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿರುವುದು ಸರಿಯಲ್ಲ ಎಂದು ಜೆಪ್ಪು- ಮಜಿಲ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಬದಲು ಪಾಲಿಕೆಯು ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡಿ ಅಧಿಕಾರಿಗಳ ಪರವಾಗಿ ವಕಾಲತ್ತು ನಡೆಸುತ್ತಿರುವುದು ಅವ್ಯವಹಾರವಾಗಿದೆ.
ಜೆಪ್ಪು- ಮಜಿಲ ಪ್ರದೇಶದಲ್ಲಿ ಯುಜಿಡಿ ಪೈಪುಗಳು ಒಡೆದು ಕೊಳಚೆ ನೀರು ಸಾರ್ವಜನಿಕರ ಬಾವಿಯಲ್ಲಿ ತುಂಬಿತ್ತು. ಇದರ ವಿರುದ್ಧ ಸಾರ್ವಜನಿಕರು ಪಾಲಿಕೆ ಆಯುಕ್ತರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ 35 ಮಂದಿ ನಾಗರಿಕರು ದೂರು (240/2012) ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ಕೋರ್ಟ್ ಇದೊಂದಗ ಗಂಭೀರ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ 2014ರಲ್ಲಿ ತೀರ್ಪು ನೀಡಿ ತೊಂದರೆಗೀಡಾದ ನಾಗರಿಕರಿಗೆ ಪ್ರತಿ ದಿನಕ್ಕೆ ತಲಾ 50 ರೂ.ನಂತೆ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ತಪ್ಪಿತಸ್ಥ ಅಧಿಕಾರಿಗಳು ಆ ತೀರ್ಪಿನ ವಿರುದ್ಧ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದಾರೆ.
ವೇದಿಕೆಯ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸಲು ಮಹಾನಗರ ಪಾಲಿಕೆಯು ಸಾರ್ವಜನಿಕರ ಹಣವನ್ನು ಉಪಯೋಗಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಈ ಅಪೀಲು ಹಾಕಿದ ಹಣವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ಭರಿಸುವಂತೆ ಕ್ರಮ ಕೈಗೊಳ್ಳಲು ಎಎಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಅವರು ಆಯುಕ್ತರನ್ನು ಒತ್ತಾಯಿಸಿದರು.
ಈ ಬಗ್ಗೆ ಕಡತವನ್ನು ತರಿಸಿ ಪರಿಶೀಲಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ
ಆಮ್ ಆದ್ಮಿ ಪಾರ್ಟಿ ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಅವರೊಂದಿಗೆ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಅಪ್ಝರ್ ರಝಾಕ್, ಗ್ರಿವೆನ್ಸ್ ವೆಬ್ ಸೈಟ್ ಸಂಯೋಜಕ ಶನಾನ್ ಪಿಂಟೋ,ಜಯದೇವ್ ಕಾಮತ್, , ಹಬೀಬ್ ಖಾದರ್, ಹಮೀದ್, ರೋನಿ ಕ್ರಾಸ್ತ, ಪ್ರಕರಣಕ್ಕೆ ಸಂಬಂಧಪಟ್ಟ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Ee party ye vondu dodda samashye ee samajhakke