Thursday, October 6, 2022
Homeಅಪಘಾತಟೆಂಪೋ ಟ್ರಾವೆಲ್ಲರ್ ಮತ್ತು ಆಟೋ ನಡುವೆ ಅಪಘಾತ >> ಇಬ್ಬರು ಗಂಭೀರ

ಟೆಂಪೋ ಟ್ರಾವೆಲ್ಲರ್ ಮತ್ತು ಆಟೋ ನಡುವೆ ಅಪಘಾತ >> ಇಬ್ಬರು ಗಂಭೀರ

- Advertisement -
Renault

Renault

Renault

- Advertisement -

ವಿಟ್ಲ: ಆಟೋ ರಿಕ್ಷಾ ಪಲ್ಟಿಯಾಗಿ ಟೆಂಪೋ ಟ್ರಾವೆಲ್ಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಮಧ್ಯರಾತ್ರಿ ಸಂಭವಿಸಿದೆ.

ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಅಟೋ ರಿಕ್ಷಾ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ ಬುಡೋಳಿ ವಿಸ್ಡಂ ಶಾಲೆಯ ಎದುರು ಅಪಘಾತ ಸಂಭವಿಸಿದೆ.

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಂಜೇಶ್ವರ ನಿವಾಸಿಗಳು ಇಬ್ಬರು ಗಂಭೀರ ಗಾಯಗೊಂಡಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯವಾಗಿದೆ. ಮಧ್ಯರಾತ್ರಿ 2 ಗಂಟೆಗೆ ಅಪಘಾತ ಸಂಭವಿಸಿದ್ದು, ತಕ್ಷಣವೇ ಕಾರ್ಯಪ್ರವರ್ತರಾದ ಸೋಷಿಯಲ್ ಇಕ್ವ ಮಾಣಿಯ ಆಂಬ್ಯುಲೆನ್ಸ್ ನ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದವರನ್ನು ಮಂಗಳೂರು ಹೈಲಾಂಡ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments