ಅಬ್ಬಾಬ್ಬಾ ಈ ದೃಶ್ಯ ನೋಡಿದವರ ಎದೆ ಝಲ್ ಅನ್ನುತ್ತೆ…!!!
ಬ್ರೇಕ್ ಫೇಲ್ ಆಗಿ ಅರ್ಧ ಕಿಲೋ ಮೀಟರ್ ಹಿಂದಕ್ಕೆ ಚಲಿಸಿ ಲಾರಿ ಪಲ್ಟಿ…!!!
ಮಂಗಳೂರಿನ ತಲಪಾಡಿ-ದೇವಿಪುರದಲ್ಲಿ ನಡೆದ ಭೀಕರ ಘಟನೆ…!!!
ಮಂಗಳೂರು: ಬ್ರೇಕ್ ಫೇಲ್ ಆಗಿ ಅರ್ಧ ಕಿಲೋಮೀಟರ್ ಹಿಮ್ಮುಖವಾಗಿ ಬಂದ ಮರಳು ಲಾರಿ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ
ಮಂಗಳೂರು ಹೊರವಲಯದ ತಲಪಾಡಿ-ದೇವಿಪುರ ಬಳಿ ನಡೆದಿದೆ. ಅದೃಷ್ಟವಶಾತ್ ಭಾರೀ ಅವಘಡವೊಂದು ತಪ್ಪಿದೆ. ದೇವಿಪುರ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಎದುರು ಕಳೆದೆರಡು ದಿನಗಳ ಹಿಂದೆ ನಡೆದ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುವ ಲಾರಿಗಳು ಚಲಿಸುತ್ತಾ ಇರುತ್ತವೆ. ರಾಷ್ಟ್ರೀಯ ಹೆದ್ದಾರಿ ಬಿಟ್ಟು ಕಳ್ಳ ಮಾರ್ಗದಲ್ಲಿ ಲಾರಿಗಳು ಚಲಿಸುತ್ತಾ ಇರುತ್ತವೆ. ಪೊಲೀಸ್ ಚಕ್ ಪೋಸ್ಟ್ ತಪ್ಪಿಸಲು ಲಾರಿ ಚಾಲಕರು ಈ ಕಳ್ಳ ಮಾರ್ಗವನ್ನ ಸೃಷ್ಟಿಸಿದ್ದಾರೆ. ಅದ್ರಂತೆ ಕಳ್ಳ ಮಾರ್ಗವಾಗಿ ಲಾರಿ ಹೋಗುತ್ತಿರುವಾಗ ಬ್ರೇಕ್ ಫೈಲ್ ಆಗಿ ಘಟನೆ ನಡೆದಿದೆ.