- Advertisement -
ಮಂಗಳೂರು: ಆಳಸಮುದ್ರ ಮೀನುಗಾರಿಕೆ ವೇಳೆ ಮೀನು ಢಿಕ್ಕಿ ಹೊಡೆದು ಬೋಟ್ ಹಾನಿಗೀಡಾಗಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ತುಳುವಿನಲ್ಲಿ ಮಡಲ್ ಮೀನ್ ಎಂದು ಕರೆಯಲ್ಪಡುವ ಈ ಮೀನು ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಚೂಪಾಗಿ ಇರುವ ಮೀನಿನ ಬಾಯಿ ಮುರಿದು ರಕ್ತಸ್ರಾವ ಉಂಟಾಗಿದೆ. ಅತ್ತ ಮೀನು ಗುದ್ದಿದ ಪರಿಣಾಮಕ್ಕೆ ಮೀನುಗಾರಿಕಾ ದೋಣಿಯೇ ಹಾನಿಗೀಡಾಗಿದೆ. ಈ ದೋಣಿ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.