Tuesday, September 27, 2022
Homeಕರಾವಳಿಸಾಲ ಪಡೆದು ಪೊಲೀಸರ ಬಲೆಗೆ ಬಿದ್ದ ಹಳೆ ಪ್ರಕರಣದ ಆರೋಪಿ..!!

ಸಾಲ ಪಡೆದು ಪೊಲೀಸರ ಬಲೆಗೆ ಬಿದ್ದ ಹಳೆ ಪ್ರಕರಣದ ಆರೋಪಿ..!!

- Advertisement -
Renault

Renault

Renault

Renault


- Advertisement -

46ವರ್ಷದ ಹಿಂದೆ ನಡೆದ ಹಳೆ ಪ್ರಕರಣಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಟ್ಕಳ: 46 ವರ್ಷದ ಹಿಂದೆ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಬೆಳಕೆ ನಿವಾಸಿ ಈಶ್ವರ ಮಾಣಿ ನಾಯ್ಕ ಎಂದು ತಿಳಿದು ಬಂದಿದೆ. 1975ರಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ದೋಷಿಗಳು ಎಂದು ತೀರ್ಪು ನೀಡಿತ್ತು. ಪ್ರಕರಣದ 8ನೇ ಆರೋಪಿಯಾದ ಮಾಣಿ ನಾಯ್ಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದನು.

ಇತ್ತೀಚೆಗೆ ಆರೋಪಿ ಮಾಣಿ ನಾಯ್ಕ ಭಟ್ಕಳ ಸೊಸೈಟಿಯೊಂದರಲ್ಲಿ ಸಾಲ ಪಡೆದಿದ್ದ. ಇದರ ಆಧಾರದ ಮೇಲೆ ಆತನ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿ ಬಂಧಿಸಲು ಯಶಸ್ವಿಯಾಗಿದ್ದಾರೆ ಪಿಎಸ್​ಐ ಭರತ್​ ಕುಮಾರ ಮಾರ್ಗದಲ್ಲಿ ಪೊಲೀಸ್ ಕಾನ್ಸ್​​ಟೇಬಲ್​​ ಪರಮಾನಂದ ಉಜ್ಜಿನಕೊಪ್ಪ ಅವರು ಆರೋಪಿಯನ್ನು ಬಂಧಿಸಿದ್ದಾರೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments