Friday, May 14, 2021
Homeಸಿನಿಮಾಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನ ವಿರೋಧಿಸಿದ್ರಾ ನಟ ವಿಜಯ್…!!!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನ ವಿರೋಧಿಸಿದ್ರಾ ನಟ ವಿಜಯ್…!!!

- Advertisement -
Rental
Rental
- Advertisement -Home Plus
- Advertisement -
Platform
Maya Builders

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನ ವಿರೋಧಿಸಿದ್ರಾ ನಟ ವಿಜಯ್…!!!

ಸೈಕಲ್ ಏರಿ ಬಂದು ಮತ ಚಲಾಯಿಸಿದ ಇಳಯದಳಪತಿ ವಿಜಯ್…!!!

ಚೆನ್ನೈ: ಒಂದೇ ಹಂತದಲ್ಲಿ ನಡೆಯುತ್ತಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಸೈಕಲ್ ಏರಿ ಬಂದು ಮತದಾನ ಮಾಡುವ ಮೂಲಕ ತಮಿಳು ನಟ ವಿಜಯ್ ಅಚ್ಚರಿ ಮೂಡಿಸಿದ್ದಾರೆ.

ಇಂದು ತಮಿಳುನಾಡು ರಾಜ್ಯದಲ್ಲಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ‌. ಚೆನ್ನೈನ ನೀಲಾಂಕರೈನಲ್ಲಿ ನಟ ವಿಜಯ್ ಮತ ಹಾಕಬೇಕಿತ್ತು. ಆದರೆ ನಟ ವಿಜಯ್ ತಮ್ಮ ಕಾರಿನಲ್ಲಿ ಮತಗಟ್ಟಗೆ ಬಾರದೇ ಸೈಕಲ್ ನಲ್ಲಿ ಬಂದು ಮತದಾನ ಮಾಡಿದರು. ಇದು ಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದ್ದು, ಸುಳ್ಳಲ್ಲ.

ದೇಶದಲ್ಲಿ ಪೆಟ್ರೋಲ್ ,.ಡಿಸೇಲ್ ಬೆಲೆ ಏರಿಕೆ ನೂರರ ಗಡಿ ದಾಟಿದೆ, ಕೋವಿಡ್ ಬಿಕ್ಕಟ್ಟಿನ ಇಂಥ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನೀತಿಗೆ ದೇಶಾದ್ಯಂತ ಹಲವು ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನಟ ವಿಜಯ್ ಕೂಡ ಪೆಟ್ರೋಲ್ ದರ ಏರಿಕೆಯನ್ನು ವಿರೋಧಿಸಿ ಕಾರ್ ಬಿಟ್ಟು ಸೈಕಲ್ ಸವಾರಿ ಮಾಡಿ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಚುನಾವಣಾ ದಿನವೇ ಈ ರೀತಿ ಸೈಕಲ್‌ ಏರಿದ್ದರ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಸರ್ಕಾರದ ಈ ನಡೆಯನ್ನು ವಿರೋಧಿಸುವ ಸಲುವಾಗಿಯೇ ವಿಜಯ್ ಮತದಾನ ಮಾಡಲು ಸೈಕಲ್ ಸವಾರಿ ಮಾಡಿದ್ದಾರೆ ಎಂದು ಕೆಲವರು ಎಂದರೆ, ಮತಗಟ್ಟೆಯ ಹತ್ತಿರವೇ ನಟ ವಿಜಯ್ ಅವರ ಮನೆಯಿದೆ, ಹೀಗಾಗಿ ಅವರು ಕಾರ್ ಬದಲಾಗಿ ಸೈಕಲ್ ನಲ್ಲಿ ಬಂದಿದ್ದಾರೆ ಎಂದು ಇನ್ನೂ ಕೆಲವರ ವ್ಯಾಖ್ಯಾನವಾಗಿದೆ.

ನಟ ವಿಜಯ್ ಅವರು ಈ.ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಸರ್ಕಾರದ ನಿರ್ಣಯಗಳನ್ನು ವಿರೋಧಿಸಿದ್ದಾರೆ. ತಮ್ಮ ಸೂಪರ್ ಹಿಟ್ ಸಿನಿಮಾ ‘ಮೆರ್ಸಲ್’ ಚಿತ್ರದಲ್ಲಿ ಜಿಎಸ್‌ಟಿ ವಿರುದ್ಧವಾಗಿ ವಿಜಯ್ ಡೈಲಾಗ್ ಹೊಡೆದಿದ್ದರು. ಈಗ ಪೆಟ್ರೋಲ್ ದರ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ನೀತಿಗೆ ಪ್ರತಿರೋಧ ವ್ಯಕ್ತಪಡಿಸಿದರೂ ಅಚ್ಚರಿಪಡಬೇಕಾಗಿಲ್ಲ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments