Tuesday, September 28, 2021
Homeರಾಜಕೀಯಕಪ್ಪು, ಬಿಳಿ, ಹಳದಿ ಆಯ್ತು…ಈಗ ಹಸಿರು ಫಂಗಸ್​ ಪತ್ತೆ : ದೇಶದ ಮೊದಲ ಪ್ರಕರಣ

ಕಪ್ಪು, ಬಿಳಿ, ಹಳದಿ ಆಯ್ತು…ಈಗ ಹಸಿರು ಫಂಗಸ್​ ಪತ್ತೆ : ದೇಶದ ಮೊದಲ ಪ್ರಕರಣ

- Advertisement -
Renault
- Advertisement -
Home Plus
- Advertisement -

ಬ್ಲ್ಯಾಕ್​ ಫಂಗಸ್​, ವೈಟ್​ ಫಂಗಸ್, ಯೆಲ್ಲೋ ಫಂಗಸ್​ ಆಯ್ತು… ಇದೀಗ ಗ್ರೀನ್​ ಫಂಗಸ್​ ಪತ್ತೆಯಾಗಿದೆ. ಕಪ್ಪು, ಬಿಳಿ, ಹಳದಿ ಫಂಗಸ್​ನ ಅಟ್ಟಹಾಸ ಹೆಚ್ಚುತ್ತಿರುವ ನಡುವೆಯೇ ಗ್ರೀನ್​ ಫಂಗಸ್​ ಕಾಣಿಸಿಕೊಂಡು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖವಾದ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಗ್ರೀನ್​ ಫಂಗಸ್​ ಪತ್ತೆಯಾಗಿದ್ದು, ಇದು ದೇಶದಲ್ಲೇ ಮೊದಲ ಪ್ರಕರಣ. ಸೈನಸ್ ಮತ್ತು ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಗ್ರೀನ್​ ಫಂಗಸ್​ ಪತ್ತೆಯಾದ ರೋಗಿಯು ಜ್ವರ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಗ್ರೀನ್​ ಫಂಗಸ್​ ರೋಗಿಯನ್ನು ಏರ್​ ಲಿಫ್ಟ್​ ಮೂಲಕ ಮುಂಬೈನ ಆಸ್ಪತ್ರೆಗೆ ರವಾನಿಸಲಾಗಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲೇ ಇದ್ದರು. ಗುಣಮುಖರಾದ ಬಳಿಕ ಮನೆಗೆ ಕಳಿಸಲಾಗಿತ್ತು. ಇದಾದ 10 ದಿನಕ್ಕೆ ಮೂಗು ತುರಿಕೆ, ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಹಸಿರು ಫಂಗಸ್​ ಪತ್ತೆಯಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments