ಬಾಲಿವುಡ್‌ನ ಅತೀ ಸುಪ್ರಸಿದ್ಧ ಗಾಯಕ ಮತ್ತು ನಟ ಯೋ ಯೋ ಹನಿ ಸಿಂಗ್ ರವರ ವಿರುದ್ಧ ಆತನ ಪತ್ನಿಯಿಂದಲೇ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯದ ಕೇಸ್ ಮಾತ್ರವಲ್ಲದೇ ಯೋ ಯೋ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಮತ್ತು ಆರ್ಥಿಕ ವಂಚನೆ ಪ್ರಕರಣವನ್ನು ಪತ್ನಿ ಶಾಲಿನಿ ತಲ್ವಾರ್ ದಾಖಲು ಮಾಡಿದ್ದಾರೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ದೆಹಲಿಯ ಟಿಸ್ ಹಜಾರಿ ಕೋರ್ಟ್‌ನಲ್ಲಿ ಯೋ ಯೋ ಹನಿ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತ್ನಿ ಮಾಡಿರುವ ಆರೋಪಕ್ಕೆ ಉತ್ತರ ನೀಡುವಂತೆ ಕೋರ್ಟ್ ಈಗಾಗಲೇ ನೋಟಿಸ್ ನೀಡಿದೆ.
ರಿಯಾಲಿಟಿ ಶೋ ಒಂದರ ಮೂಲಕ ಹನಿ ಸಿಂಗ್ ತಮ್ಮ ಪತ್ನಿಯನ್ನು ಎಲ್ಲರಿಗೂ ಪರಿಚಯ ಮಾಡಿದ್ದರು. ಅಂದಿನಿಂದ ಅನೇಕ ಸಂದರ್ಭಗಳಲ್ಲಿ ಇಬ್ಬರು ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಹನಿ ಸಿಂಗ್ ವಿರುದ್ಧ ದಿಢೀರ್ ಆರೋಪ ಕೇಳಿಬಂದಿರುವುದನ್ನು ನೋಡಿ ಬಾಲಿವುಡ್ ಸಹ ಆಘಾತಕ್ಕೆ ಒಳಗಾಗಿದೆ. ಶಾಲಿನಿ ಅವರು ಸುಮಾರು 120 ಪುಟಗಳ ದೂರನ್ನು ನೀಡಿದ್ದು, ಅದರಲ್ಲಿ ಗಂಡನ ದುಷ್ಕೃತ್ಯಗಳನ್ನು ವಿವರವಾಗಿ ಬರೆದಿದ್ದಾರೆ. ಗಂಡ ನನಗೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಕೊಲೆಯ ಬೆದರಿಕೆಯು ಇತ್ತು. ಗಂಡನ ಮನೆಯಲ್ಲಿ ಎಲ್ಲರೂ ರಾಕ್ಷಸರ ರೀತಿ ವರ್ತಿಸುತ್ತಿದ್ದರು ಎಂದು ಶಾಲಿನಿ ಆರೋಪಿಸಿದ್ದಾರೆ. ಗಂಡನಿಗೆ ಡಜನ್ಗೂ ಅಧಿಕ ಮಹಿಳೆಯರ ಜತೆ ವಿವಾಹೇತರ ಸಂಬಂಧವಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಮೃಗೀಯವಾಗಿ ಹಿಂಸಿಸುತ್ತಿದ್ದರು ಎಂದು ಶಾಲಿನಿ ಗಂಭೀರ ಆರೋಪ ಮಾಡಿದ್ದಾರೆ.
ಈಗ ಹನೀ ಸಿಂಗ್ ತಂದೆ,ಅಂದರೆ ಅವರ ಮಾವನ ವಿರುದ್ಧ ಶಾಲಿನಿ ಸಂಚಲನ ಸೃಷ್ಟಿಸುವಂತಹ ಗಂಭೀರ ಆರೋಪ ಮಾಡಿದ್ದಾರೆ. ಮಾವನು ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ಒಂದು ದಿನ ನಾನು ಕೋಣೆಯಲ್ಲಿ ಬಟ್ಟೆ ಬದಲಾಯಿಸುವಾಗ ಹನಿ ಸಿಂಗ್ ತಂದೆ ಪಾನಮತ್ತ ಸ್ಥಿತಿಯಲ್ಲಿ ನನ್ನ ಕೋಣೆಯೊಳಗೆ ನುಗ್ಗಿದರು. ನನ್ನ ಎದೆಯನ್ನು ಹಿಡಿದುಕೊಂಡು ಕಿರುಕುಳ ನೀಡಿದರು ಎಂದು ಆರೋಪ ಮಾಡಿದ್ದಾರೆ.
ಇವೆಲ್ಲವುಗಳಿಗೆ ನನಗೆ ನ್ಯಾಯ ಕೊಡಿಸಿ ಎಂದಿರುವ ಶಾಲಿನಿ, 20 ಕೋಟಿ ರೂಪಾಯಿ ಪರಿಹಾರ, ತಿಂಗಳಿಗೆ 5 ಲಕ್ಷ ರೂಪಾಯಿ ಹಣ, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಫುಲ್ ಫರ್ನಿಷ್ ಆಗಿರುವ ಬಂಗಲೆ ನೀಡಲು ಆದೇಶಿಸಬೇಕು ಹಾಗೂ ತಾನು ಮದುವೆಯ ವೇಳೆ ನೀಡಿರುವ ವರದಕ್ಷಿಣೆಯನ್ನು ಸಂಪೂರ್ಣವಾಗಿ ಹಿಂದಿರುಗಿಸಲು ಗಂಡನಿಗೆ ಆದೇಶಿಸಬೇಕು ಎಂದು ಶಾಲಿನಿ ಕೋರಿದ್ದಾರೆ. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್ ಹನಿಸಿಂಗ್ ರವರಿಗೆ ನೋಟಿಸ್ ಜಾರಿಗೊಳಿಸಿದ್ದು ಇದೇ ಆಗಸ್ಟ್ 28 ರ ಒಳಗೆ ಉತ್ತರಿಸುವಂತೆ ಹೇಳಿಕೆ ನೀಡಿದೆ.
20 ಕೋಟಿ ರೂಪಾಯಿ ಪರಿಹಾರ, ತಿಂಗಳಿಗೆ 5 ಲಕ್ಷ ರೂಪಾಯಿ ಹಣ, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಫುಲ್ ಫರ್ನಿಷ್ ಆಗಿರುವ ಬಂಗಲೆ???
ಬೇಡಿಕೆ ತುಂಬಾ ಕಡಿಮೆಯಾಯಿತು.