Sunday, September 24, 2023
Homeಕರಾವಳಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

- Advertisement -Renault

Renault
Renault

- Advertisement -

ಮಂಗಳೂರು : ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಅವಧಿಯನ್ನು ಎಲ್ಲಾ ವರ್ಷದ, ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿಯುವವರೆಗೆ ವಿಸ್ತರಿಸಬೇಕಾಗಿ, ಸಾರಿಗೆ ಸಚಿವರಾದ ಶ್ರೀಯುತ ಶ್ರೀರಾಮುಲು ಅವರಿಗೆ , ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ನೇತೃತ್ವದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ನಂತರ ಸಾರಿಗೆ ಸಚಿವರು 1 ತಿಂಗಳುಗಳ ಕಾಲ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿ , ನೂತನ ಬಸ್ ಪಾಸ್ ಅನ್ನು ಮಾಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯಾವಕಾಶವನ್ನು ನೀಡುವುದಾಗಿ ಆದೇಶವನ್ನು ನೀಡಿದ್ದಾರೆ.

ಈ ಸಮಯದಲ್ಲಿ ವಿಭಾಗ ಸಂಚಾಲಕರಾದ ಹರ್ಷಿತ್ ಕೊಯ್ಲ, ಜಿಲ್ಲಾ ಸಂಚಾಲಕರಾದ ಶ್ರೇಯಸ್ ಶೆಟ್ಟಿ , ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀಲಕ್ಷ್ಮೀ , ಪ್ರಮುಖರಾದ ಸ್ಕಂದ , ಶ್ರೀಪಾದ್ ತಂತ್ರಿ , ವಿನೀತ್ ಭಟ್ , ವೃತ್ವಿಕ್ ಉಪಸ್ಥಿತರಿದ್ದರು .

- Advertisement -

LEAVE A REPLY

Please enter your comment!
Please enter your name here

Most Popular

Recent Comments