Saturday, September 30, 2023
Homeಕ್ರೈಂಲೈಂಗಿಕ ದೌರ್ಜನ್ಯ ಆರೋಪ : ಮುರುಘಾ ಮಠದ ಶ್ರೀಗಳಿಗೆ ಸೆ. 14ರವರೆಗೆ ನ್ಯಾಯಾಂಗ ಬಂಧನ !!!

ಲೈಂಗಿಕ ದೌರ್ಜನ್ಯ ಆರೋಪ : ಮುರುಘಾ ಮಠದ ಶ್ರೀಗಳಿಗೆ ಸೆ. 14ರವರೆಗೆ ನ್ಯಾಯಾಂಗ ಬಂಧನ !!!

- Advertisement -Renault

Renault
Renault

- Advertisement -

ಚಿತ್ರದುರ್ಗ: ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬಂಧನವಾಗಿರುವ ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಶರಣರನ್ನು ಸೆ. 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶ್ರೀಗಳ ಪೊಲೀಸ್ ಕಸ್ಟಡಿ ಅವಧಿ ಸೋಮವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಅವರನ್ನು ಚಿತ್ರದುರ್ಗದ 2ನೇ ಅಪರ ಸತ್ರ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು.

ಬಳಿಕ ಶ್ರೀಗಳಿಗೆ ಸೆ.14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ನ್ಯಾಯಾಧೀಶೆ ಕೋಮಲಾ ಅವರು ಆದೇಶಿಸಿದರು.

ಕೋರ್ಟಿಗೆ ಹಾಜರು ಪಡಿಸುವ ಮುನ್ನ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಅವರನ್ನು ಒಳಪಡಿಸಲಾಯಿತು. ಕೋರ್ಟ್​ಗೆ ಹಾಜರು ಪಡಿಸುವ ವೇಳೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಶರಣರಿಗೆ ಜಾಮೀನು ಕೋರಿ ಅವರ ಪರ ವಕೀಲರು ಶನಿವಾರವೇ ಅರ್ಜಿ ಸಲ್ಲಿಸಿದ್ದಾರೆ. ಸೆ.7ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments