ಮಂಗಳೂರು : ಅಮೆಜಾನ್ ಕಂಪನಿ ನಿಯೋಜಿಸಿದ ಕೋವಿಡ್-19 ದೇಶದ ವೃತ್ತಿಪರರ ಉದ್ಯೋಗಗಳು ಮತ್ತು ಭವಿಷ್ಯದ ವೃತ್ತಿ ಯೋಜನೆಗಳ ಮೇಲೆ ಉಂಟು ಮಾಡುವ ಪರಿಣಾಮವನ್ನು ಅರಿಯುವ ಸಮೀಕ್ಷೆಯ ಫಲಿತಾಂಶವನ್ನು ಹಂಚಿಕೊಂಡಿದೆ.
ಈ ಅಧ್ಯಯನವನ್ನು ಜಾಗತಿಕ ಡೇಟಾ ಇಂಟೆಲಿಜೆನ್ಸ್ ಕಂಪನಿ ಮಾರ್ನಿಂಗ್ ರಿಸಲ್ಟ್ ಆಗಸ್ಟ್ 17 ರಿಂದ 23 ವರೆಗೆ ನಡೆಸಿದ್ದು ದೇಶದಾದ್ಯಂತ 1000 ವೃತ್ತಿಪರ ವಯಸ್ಕರನ್ನು ಒಳಗೊಂಡಿದೆ. ಈ ಅಧ್ಯಯನದ ಪ್ರಕಾರ ಹೊಸ ಹಾಗೂ ವಿಭಿನ್ನ ಬಗೆಯ ಕೆಲಸ ನಿರೀಕ್ಷಿಸುವ ಭಾರತದ ವೃತ್ತಿಪರರು, ಶೇ.59 ರಷ್ಟು ಮಂದಿ ಸಕ್ರಿಯವಾಗಿ ಉದ್ಯೋಗ ಹುಡುಕುತ್ತಿದ್ದಾರೆ. ಅಮೆಜಾನ್ ಉತ್ಸಾಹಕರ ಉದ್ಯೋಗದ ಸ್ಥಳವಾಗಿಸಲು ವಿಸ್ತಾರ ಪ್ರತಿಭೆಯನ್ನು ಅರ್ಥ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಅಮೆಜಾನ್ ಕೆರೀರ್ ಡೇ ಸೆಪ್ಟೆಂಬರ್ 16 ರಂದು ಬೆಳಿಗ್ಗೆ 10:00 ಕ್ಕೆ ಪ್ರಾರಂಭವಾಗುತ್ತದೆ. ಹೆಚ್ಚಿನ ವಿವರಗಳು ಮತ್ತು ನೋಂದಣಿಗೆ ಇಲ್ಲಿwww.amazon.in/aboutus ಗೆ ಕ್ಲಿಕ್ ಮಾಡಬೇಕಾಗಿದೆ.