ಉಡುಪಿ : ಟೈಯರ್ ಸ್ಪೋಟಗೊಂಡು ಅನಾರೋಗ್ಯ ಪೀಡಿತ ಮಗುವನ್ನು ಕರೆದುಕೊಂಡು ಬರುತ್ತಿದ್ದಂತಹ ಆಂಬ್ಯುಲೆನ್ಸ್ ಅಪಘಾತಕ್ಕೀಡಾದ ಘಟನೆ ಬ್ರಹ್ಮಾವರ ತಾಲೂಕಿನ ಮಾಬುಕಳ ಸೇತುವೆಯ ಬಳಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಅನಾರೋಗ್ಯಪೀಡಿತ ಮಗುವನ್ನು ಕರೆತರುತ್ತಿದ್ದಂತಹ ಅಂಬ್ಯುಲೆನ್ಸ್ ನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ಡಿವೈಡರ್ ಹಾರಿ ಸೇತುವೆಯ ಆವರಣ ಗೊಡೆಗೆ ಡಿಕ್ಕಿಯಾಗಿದೆ. ಸೇತುವೆಯ ಆವರಣಗೊಡೆಗೆ ಡಿಕ್ಕಿಯಾದ ಪರಿಣಾಮ ಅಂಬ್ಯುಲೆನ್ಸ್ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅಪಘಾತದಲ್ಲಿ ಆಂಬುಲೆನ್ಸ್ ನಲ್ಲಿ ಮಗುವನ್ನು ಕರೆದೊಯ್ಯುತ್ತಿದ್ದ ಮಹಿಳೆಗೆ ಕೂಡ ಗಾಯಗಳಾಗಿದ್ದು, ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ.
Recent Comments
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಮಂಗಳೂರಿನಲ್ಲೊಬ್ಬ ಸೋನು ಸೂದ್ : ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ. ಇ. ಒ ವಿವೇಕ್ ರಾಜ್ ಪೂಜಾರಿ
on
ದೇಶವಿದೇಶಗಳಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೋ : ಅಂಬಾನಿ ತನ್ನ ಘನತೆಗಾಗಿ ದೇಶದ ಘನತೆಯನ್ನು ಕುಗ್ಗಿಸುತ್ತಿದ್ದಾರೋ…!
on