Sunday, May 28, 2023
Homeಕರಾವಳಿಈತ ವಿಕಲಚೇತನ ಅಲ್ಲ, ನಿಜವಾಗಿಯೂ ವಿಶಿಷ್ಟ ಚೇತನ! ಇದು ಕಥೆಯಲ್ಲ: ವಾಸ್ತವ- ಡಾ. ಶಶಿಕಿರಣ್ ಶೆಟ್ಟಿ

ಈತ ವಿಕಲಚೇತನ ಅಲ್ಲ, ನಿಜವಾಗಿಯೂ ವಿಶಿಷ್ಟ ಚೇತನ! ಇದು ಕಥೆಯಲ್ಲ: ವಾಸ್ತವ- ಡಾ. ಶಶಿಕಿರಣ್ ಶೆಟ್ಟಿ

- Advertisement -


Renault

Renault
Renault

- Advertisement -

ಉಡುಪಿ, ಫೆ.20: ಆತ ಏನಾದರೂ ಮಾಡಿ ಈ ಭಾರಿ ಜಿಲ್ಲಾ ಪಂಚಾಯತ್ ಚುನಾವಣೆ ಗೆ ಸ್ಪರ್ದಿಸಲು ನಿರ್ಧರಿಸಿದ್ದ ಕಾರಣ ಜನರ ಮನಸ್ಸನ್ನು ಮುಟ್ಟುವ ಒಂದೆರಡು ಕೆಲಸ ಮಾಡಬೇಕೆಂದು ನಿರ್ಧರಿಸಿದ್ದ.

ಅಲ್ಲೇ ಊರಲ್ಲಿದ್ದ ನಿರಾಶ್ರಿತರ ಮಾನಸಿಕ ಹಾಗು ವಿಕಲ ಚೇತನರ ಆಶ್ರಮಕ್ಕೆ ಒಂದು ಲಕ್ಷ ರೂಪಾಯಿ ದಾನ ಮಾಡುವುದಾಗಿ ನಿರ್ಧರಿಸಿದ್ದ .
ಅದಕ್ಕಾಗಿ ಸಕಲ ಸಿದ್ಧತೆಗಳು ಮುಗಿದಿದ್ದವು,ಪತ್ರಿಕೆಯಲ್ಲಿ ಅರ್ಧ ಪುಟ ಜಾಹೀರಾತಿಗೆ 2ಲಕ್ಷ ,ತನ್ನ ಬೆಂಬಲಿಗರಿಗೆ 1 ಲಕ್ಷ ಹಾಗು ಇತರ ಖರ್ಚು 1ಲಕ್ಷ ಒಟ್ಟು 5 ಲಕ್ಷ ಖರ್ಚು ಮಾಡುವ ಪ್ಲಾನಿಂಗ್ ಹಾಕಿಕೊಂಡಿದ್ದ.
ಅಂದು ಆ ನಿರಾಶ್ರಿತರ ತಾಣ ದಲ್ಲಿ ಕಾರ್ಯಕ್ರಮ ನಿಗದಿ ಯಾಗಿತ್ತು .ಬೆಂಬಲಿಗರೆಲ್ಲರೂ ಜೈಕಾರ ಹಾಕತಿದ್ದರು ಅಲ್ಲೊಂದು ಸಭಾಕಾರ್ಯಕ್ರಮ ಆಯೋಜಿಸಿದ್ದರು ದೊಡ್ಡ ಸಭೆಯಲ್ಲಿ 1 ಲಕ್ಷದ ಚೆಕ್ ಕೊಡುವ ಸುಂದರ ಪ್ಲಾನಿಂಗ್ ಅದಾಗಿತ್ತು ಸ್ಟೇಜ್ ಅಲ್ಲಿ ಈ ರಾಜಕೀಯ ಮುಖಂಡ ಇದ್ದ.ಎಂದಿನಂತೆ ಮಾತು, ಹೊಗಳಿಕೆ ನಡೆಯುತಿತ್ತು.

ಮೇಲೆ ಕೂತಿದ್ದವನ ದೃಷ್ಟಿ ಕೆಳಗೆ ಹೋಗುತ್ತದೆ ಅಲ್ಲಿ ಒಂದು ಕಡೆ ನಿರ್ಗತಿಕರು,ಮಾನಸಿಕ ವಿಕಲ ಚೇತನರು ಕುಳಿತು ಕೊಂಡಿದ್ದರೆ ಒಬ್ಬ ಕುರುಡ ಮಾತ್ರ ನಡೆಯುತ್ತಿದ್ದ.ಆದರೆ ಅಲ್ಲಿ ದೊಡ್ಡದೊಂದು ನೀರಿನ ಹೊಂಡ ವೊಂದಿತ್ತು ಅದು ನೆಲದಿಂದ 6 ಫೀಟ್ ಕೆಳಗಿತ್ತು..ಅಲ್ಲಿ ಕಲ್ಲು ಗಳಿದ್ದವು ಕುರುಡ ನಡೆಯುತ್ತಾ ಮುಂದೆ ಮುಂದೆ ಬರುತಿದ್ದ ಅವನಿಗೆ ಅದರ ಅರಿವಿರಲಿಲ್ಲ ಎಲ್ಲರ ಗಮನ ಸಭೆಯತ್ತ ಇದ್ದ ಕಾರಣ ಯಾರೂ ಗಮನಿಸಿರಲಿಲ್ಲ ಅವನನ್ನು ..ಇನ್ನೇನು ಕುರುಡ ಬೀಳುವುದರಲ್ಲಿದ್ದ ಅವನನ್ನು ರಕ್ಷಿಸ ಬಹುದಿತ್ತು ಇವನಿಗೆ ಆದರೆ ಸಭೆ ಇಂದ ಏಳಲು ಧೈರ್ಯ ಮಾಡಿರಲಿಲ್ಲ ಈತ. ಇಲ್ಲಿ ನನಗಾಗಿ ನಡೆಯುತ್ತಿರುವ ಈ ಸಮಾರಂಭ ದಲ್ಲಿ ನನ್ನ ಇಮೇಜ್ ಹಾಳಾಗುವುದು ಇಷ್ಟವಿರಲಿಲ್ಲ ಅವನಿಗೆ.

ಕುರುಡ ಮತ್ತು ಮುಂದು ವರಿದಿದ್ದ ಇನ್ನೇನು ಬೀಳುವುದರಲ್ಲಿದ್ದ ..ಎತ್ತಿದ ಕಾಲು ಇಟ್ಟಿದ್ದರೆ ಕಂದಕಕ್ಕೆ ಬಿದ್ದೇ ಬಿಡುತ್ತಿದ್ದ.ಅಷ್ಟರಲ್ಲಿ ಅಲ್ಲೇ ವೀಲ್ ಚೇರ್ ಅಲ್ಲಿ ಕೂತಿದ್ದ ವಿಕಲ ಚೇತನನೊಬ್ಬ ಗಟ್ಟಿಯಾಗಿ ನಿಲ್ಲು ಎಂದು ಕೂಗಿದ್ದ.ಹಾಗೆ ಕಾಲು ಸರಿ ಯಾಗಿಲ್ಲದ ಇನ್ನೊಬ್ಬ ವಿಕಲ ಚೇತನನೊಬ್ಬ ಜೋರಾಗಿ ಕುಂಟುತ್ತಾ ಓಡಿ ಬಂದು ಬೀಳುತಿದ್ದ ಕುರುಡನನ್ನು ಹಿಡಿದು ಪಕ್ಕಕ್ಕೆ ಬೀಳು��

ಕೂಗಿದ್ದ.ಹಾಗೆ ಕಾಲು ಸರಿ ಯಾಗಿಲ್ಲದ ಇನ್ನೊಬ್ಬ ವಿಕಲ ಚೇತನನೊಬ್ಬ ಜೋರಾಗಿ ಕುಂಟುತ್ತಾ ಓಡಿ ಬಂದು ಬೀಳುತಿದ್ದ ಕುರುಡನನ್ನು ಹಿಡಿದು ಪಕ್ಕಕ್ಕೆ ಬೀಳುತ್ತಾನೆ.ಸಭೆ ಯಲ್ಲಿ ಈತ 1 ಲಕ್ಷ ಕೊಡುತಿದ್ದರೂ ಕೂಡ ಬಂದವರೆಲ್ಲರೂ ಸಭೆಗೆ ಬೆನ್ನು ಹಾಕಿ ಆ ಇಬ್ಬರು ವಿಕಲ ಚೇತನರಿಗೆ ಕ್ಲಾಪ್ ಹೊಡೆಯುತಿದ್ದರು.ಅವರ ಆ ಮಾನವೀಯತೆಯ ಎದುರು ಈತ ಕೊಟ್ಟ 1 ಲಕ್ಷ ನಗಣ್ಯವಾಗಿತ್ತು.ಅಲ್ಲಿ ತಾನು ಹೀರೋ ಆಗಬೇಕೆಂದು ಈತ 5 ಲಕ್ಷ ಖರ್ಚುಮಾಡಿದ್ದ.ಏನೂ ಖರ್ಚು ಮಾಡದ ಆ ಇಬ್ಬರು ವಿಕಲಚೇತನರು ನಾಯಕರಾಗಿದ್ದರು.ಎಲ್ಲ ಆಂಗಾಂಗ ಸರಿ ಇದ್ದೂ ಈತ ,ಮಾನವೀಯತೆ ಇಲ್ಲದ .ವಿಕಲ ಚೇತನ ನಾಗಿ ಬಿಟ್ಟ.

ನಮ್ಮಲ್ಲೂ ಇದ್ದಾರೆ ,ಇಂತಹ ವಿಕಲ ಚೇತನರು ದಾರಿಯಲ್ಲಿ ವೃದ್ಧ ಭಿಕ್ಷುಕನನ್ನು ನೋಡಿಯೂ ನೋಡದಂತೆ ಹೋಗುವ ಕುರುಡ ರು,ರಸ್ತೆ ಬದಿ ಹೋಗುತಿದ್ದ ನಾಯಿ ಯ ಮೇಲೆ ವಾಹನ ದ ಚಕ್ರ ಹತ್ತಿಸುವ ವಿಕೃತ ಕಾಮಿಗಳು,ಕಣ್ಣೆದುರೇ ಅನ್ಯಾಯ ನಡೆಯುತಿದ್ದರೂ ಮಾತೇ ಆಡದ ಮೂಕರು,ಇಂತಹವರೊಂದಿಗೆ ಮಾತಾಡುವುದರಿಂದ ನಮ್ಮ ಸ್ಟೇಟಸ್ ಹಾಳಾಗುತ್ತದೆ ಎನ್ನುವ ಭ್ರಮಾಲೋಕದಲ್ಲಿರುವ ಇಂತಹ ವಿಕಲ ಚೇತನರಿಗೆ .ಇನ್ನಾದರೂ ನಿಮ್ಮ ಈ ಚಾಳಿ ಯನ್ನು ಬದಲಾಯಿಸಿ ಕೊಳ್ಳಿ,ಎಂಬುದ ನ್ನು ಹೇಳ ಬಯಸುತ್ತೇನೆ ನೆನಪಿಡಿ ಇದರಿಂದ ಸಮಾಜದಲ್ಲಿ ನಿಮ್ಮ ಸ್ಟೇಟಸ್ ಕಮ್ಮಿ ಅಲ್ಲ ಖಂಡಿತ ಹೆಚ್ಚಾಗಲಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments