ಕೆಲವು ಜಾಹಿರಾತು ಗಳ ಪಂಚಿಂಗ್ ಡೈಲಾಗು ಗಳನ್ನು ಕೇಳಿ…
?ಈ ರಿಫೈನ್ಡ್ ಆಯಿಲ್ ನಿಮ್ಮ ಹೃದಯ ವನ್ನು ರಕ್ಷಿಸುತ್ತದೆ
?ಈ ಪೇಯ ನಿಮ್ಮ ಎಲುಬಿನ ಕ್ಯಾಲ್ಸಿಯಂ ಅನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ
? ಈ ಶಿಶು ಆಹಾರ ಮಕ್ಕಳ ಬೆಳವನಿಗೆ ಗೆ ಅತ್ಯಂತ ಉಪಯುಕ್ತ
?ಈ ತಿಂಡಿ 3 ಮಿನ್ ಅಲ್ಲಿ ತಯಾರಾಗಲಿದೆ ..
?ಈ ಟೂತ್ ಪೇಸ್ಟ್ ನಿಮ್ಮ ಹಲ್ಲು ಗಳನ್ನು ಗಟಿ ಗೊಳಿಸುತ್ತದೆ
?ಈ ಎಣ್ಣೆ ನಿಮ್ಮ ಕೂದಲನ್ನು ಬುಡದಿಂದ ಗಟ್ಟಿ ಗೊಳಿಸಲಿದೆ,ಈ ಕ್ರೀಮ್ ನಿಮ್ಮ ಮುಖದ ಕಾಂತಿ ಹೆಚ್ಚಿಸಲಿದೆ ..ಇತ್ಯಾದಿ,ಇತ್ಯಾದಿ ..
ನೆನಪಿಡಿ ಇವೆಲ್ಲ ಕೇವಲ ಪಂಚಿಂಗ್ ಡೈಲಾಗು ಮಾತ್ರ ಯಾವುದು ಅದಿಕೃತ ಪ್ರಮಾಣೀಕೃತ ಹೇಳಿಕೆಗಳಲ್ಲ..ಆದರೆ ಅದನ್ನು ಜಾಹೀರಾತು ಗಳಲ್ಲಿ ಹೇಳುವವರು ಬಿಳಿ ಕೋಟು ಹಾಕಿ ಕುತ್ತಿಗೆ ಯಲ್ಲಿ ಸ್ಟೆತೋಸ್ಕೋಪು ಇಟ್ಟು ಬರುವ ನಾಟಕದ ವೈದ್ಯ ರು ಗಳು ಇಲ್ಲ ಹಣ ತೆಗೆದು ಕೊಂಡು ಹೊಲಸು ತಿನ್ನುವ ವ್ಯಕ್ತಿಗಳು .ಇಲ್ಲ ಹಣ ಕ್ಕಾಗಿ ಏನೂ ಮಾಡಲು ತಯಾರಿರುವ ಚಿತ್ರ ನಟ ,ನಟಿಯರು,ಕ್ರಿಕೆಟ್ ಆಟಗಾರರು ದೊಡ್ಡ ದೊಡ್ಡ ಸೆಲೆಬ್ರೆಟಿಗಳು ..ಹಣಕ್ಕಾಗಿ ತಮ್ಮ ಆತ್ಮ ದ್ರೋಹ ಮಾಡಿಕೊಂಡು ಸ್ಕ್ರಿಪ್ಟ್ ಓದುವ ಇಂತಹ ಜೊಲ್ಲು ನಾಯಿಗಳಿಗೆ ಧಿಕ್ಕಾರವಿರಲಿ…..
ಈ ರೀತಿ ವೈದ್ಯರು ,ಸೆಲೆಬ್ರೆಟಿ ಗಳು ಹೇಳಿದ್ದು ಭಾರತೀಯರ ಎದೆಗೆ ಈಟಿ ಎಸೆದಂತೆ ಎಂಬುದು ಈ ನಿರ್ಮಾರ್ಥ ಕಂಪೆನಿ ಗಳಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ …ಈ ರೀತಿ ಒಂದು ಸ್ಟೇಟ್ಮೆಂಟ್ ಬಂತೆಂದರೆ ಹಿಂದೆ ಮುಂದೆ ನೋಡದೆ ಅದನ್ನೇ ಮಾರಕೆಟ್ಗೆ ಹೋಗಿ ತೆಗೆದು ಕೊಳ್ಳುವ ಮೂರ್ಖರು ನಮ್ಮ ಭವ್ಯಭಾರತದಲ್ಲಲ್ಲದೆ ಬೇರೆಲ್ಲೂ ಸಿಗಲಾರರು..?
ಇನ್ನು ವಿಷಯಕ್ಕೆ ಬರೋಣ ..80ರ ದಶಕದ ತನಕ ತೆಂಗಿನೆಣ್ಣೆ ಭಾರತೀಯರ ನೆಚ್ಚಿನ ಅಡುಗೆ ಎಣ್ಣೆ ಆಗಿತ್ತು …ಅಲ್ಲಿಯ ತನಕ ನಮ್ಮೆಲ್ಲರ ಹೃದಯ ಉತ್ತಮವಾಗೇ ಇತ್ತು 70 ವರ್ಷದ ತನಕ ಬಿಪಿ ,ಹೃದಯ ದ ಕಾಯಿಲೆ ನಮ್ಮ ಹತ್ತಿರವೂ ಬರುತ್ತಿರಲಿಲ್ಲ..ಮನೆ ಮನೆಗೊಬ್ಬ ಶತಾಯುಷಿ ಗಳಿದ್ದರು ಆಗ..ಬಂತು ನೋಡಿ ರಿಫೈನ್ಡ್ ಎಂಬ ಪರಿಕಲ್ಪನೆ..ಬಣ್ಣ ರುಚಿ ಇಲ್ಲದ ಬಿಳಿ ಎಣ್ಣೆ ಯಂತಹ ಪೆಟ್ರೋಲಿಯಂ ನ ಬೈ ಪ್ರಾಡಕ್ಟ್ ಲೀಟರ್ಗೆ ಅತ್ಯಂತ ಕಮ್ಮಿ ಗೆ ಸಿಗುತಿದ್ದ ಈ ಎಣ್ಣೆ ಯನ್ನು ತೆಂಗಿನ ಎಣ್ಣೆಗೆ ಮಿಶ್ರ ಮಾಡಲಾಯಿತು…ಆಮೂಲಕ ಲೀಟರ್ ಎಣ್ಣೆಯ ಲ್ಲಿ ಸಿಗುವ ಲಾಭ ದ ಲೆಕ್ಕಾಚಾರ ದೆದುರು ಪೆಟ್ರೋಲ್ ಅನ್ನು ಅಡಿಗೆ ಎಣ್ಣೆಯ ರೂಪದಲ್ಲಿ ಜನಕ್ಕೆ ಕುಡಿಸುವ ಕೆಲಸಕ್ಕೆ ಪಾಪಿಗಳು ಕೈ ಹಾಕಿದ್ದರು..ಆ ಕಾಲದಿಂದ ಇಂದಿನ ತನಕ ಪಂಚಿಂಗ್ ಡೈಲಾಗು ಒಂದೇ ಈ ಪಾಪಿಗಳು ಅಂದು ಇದ್ದ ಕೇವಲ 10% ಕೊಲೆಸ್ಟರಾಲ್ ,ಹಾರ್ಟ್ ಅಟ್ಯಾಕ್ ,ಬೊಜ್ಜು ಇತ್ಯಾದಿ ಕಾಯಿಲೆಗಳಿಗೆ ತೆಂಗಿನೆಣ್ಣೆಯೇ ಕಾರಣ ಎಂಬ ಅಪ್ಪಟ ಸುಳ್ಳನ್ನು ಬಿಳಿ ಕೋಟು ದಾರಿಗಳಿಂದ ಹೇಳಿಸಿತ್ತು.ನಿಮ್ಮ ಹೃದಯ ಸುರಕ್ಷಿತ ವಾಗಿರ ಬೇಕು ಎಂದಲ್ಲಿ
ಇಂದೇ ತೆಂಗಿನೆಣ್ಣೆಗೆ ಗುಡ್ ಬೈ ಹೇಳಿ ರಿಫೈನ್ಡ್ ಆಯಿಲ್ ನಿಮ್ಮದಾಗಿಸಿ ಏನ್ನ ಲಾಯಿತು ..ಆ ಪಂಚಿಂಗ್ ಡೈಲಾಗು ಭಾರತದ ಅಡುಗೆ ಎಣ್ಣೆಯ ದಿಕ್ಕನ್ನೇ ಬದಲಾಯಿಸಿತು..ಮನೆ ಮನೆ ಗಳಲ್ಲಿ ರಿಫೈನ್ಡ್ ಆಯಿಲ್ ಬಂತು ತೆಂಗಿನೆಣ್ಣೆ ಮೂಲೆ ಸೇರಿತ್ತು..ಯಾವೊಬ್ಬ ಬಾರತೀಯ ಕೂಡ ಇದನ್ನು ವಿರೋಧಿಸಲಿಲ್ಲ ಪರಿಣಾಮ ಕೋಟಿ ಗಟ್ಟಲೆ ಹಣ ಬಾಚಿತು ಕಂಪೆನಿ ಕೋಟಿ ಗಟ್ಟಲೆ ಹಣ ಈ ಪೆಟ್ರೋಲಿಯಂ ರಾಷ್ಟ್ರ ಗಳಿಗೆ ಹರಿದು ಹೋಯಿತು …ಬೊಜ್ಜು,ಕೊಲೆಸ್ಟರಾಲ್ ,ಹೃದಯ ಕಾಯಿಲೆ ಗಳು ಏರಿಕೆ ಯಾಯಿತು ಮುಂದೆದಶಕ ಗಳಲ್ಲೇ ಭಾರತೀಯರ ಹೃದಯ ಕಾಯಿಲೆಗಳ ಗುಡಾಣ ವಾಯಿತು ಇಂದು 20 ವರ್ಷ ದಲ್ಲೇ ಕೊಬ್ಬು ,ಕೊಲೆಸ್ಟರಾಲ್ ,ಹೃದಯ ದ ಕಾಯಿಲೆ ಯಿಂದ ಮರಣಿ ಸುವವರ ಸಂಖ್ಯೆ ಹೆಚ್ಚಾಗಿದೆ..ಮನೆಯಲ್ಲಿ ಬಿಡಿ ಊರಲ್ಲೂ ಶತಾಯುಷಿ ಗಳು ಕಾಣೆಯಾಗುತಿದ್ದರೆ…ಈಗ ಜನರಿಗೆ ಅರಿವಾಗಿದೆ ಕೊಬ್ಬರಿ ಎಣ್ಣೆ ಯಾ ಮಹತ್ವ ಮತ್ತೆ ಜನ ರಿಫೈನ್ಡ್ ಆಯಿಲ್ ಗಳನ್ನೂ ಗಟಾರಕ್ಕೆಸೆಯುವ ದಿನ ದೂರವಿಲ್ಲ ನೋಡುತ್ತಿರಿ ….
ಇದು ಕೇವಲ ಮೊದಲ ಪಂಚಿಂಗ್ ದಿಲಾಗಿನ ಬಗ್ಗೆವಿವರಣೆ ಇನ್ನು ಎಲ್ಲ ಬರೆಯಲು ಹೋದರೆ ಲೇಖನ ಧಾರಾವಾಹಿ ಯಾದೀತು ??ಆದರೂ ಎಲುಬಿನ ಕ್ಯಾಲ್ಸಿಯಂ ಗೆ ಉತ್ತಮ ಎಂದೂ ಗರ್ಭಿಣಿ ,ಮಕ್ಕಳಿಗೆ,ಪ್ರಾಯದಲ್ಲಿ ಅತ್ಯುತ್ತಮ ಪೇಯ ಎಂದು ಅರ್ಥವಿಲ್ಲದ ಜಾಹೀರಾತು ಕೊಟ್ಟು ಫ್ಲೇವರ್,ಸ್ವೀಟ್,ಪ್ರೆಸೆರ್ವಾಟಿವ್ಸ್ ,ಆಸಿಡ್ ರೆಗ್ಯುಲೇಟರ್ ನ ಹೆಸರಲ್ಲಿ ವಿವಿಧ ವಿಷ ಯುಕ್ತ ರಾಸಾಯನಿಕ ಗಳನ್ನೂ ಸೇರಿಸಿ ಮಾರಾಟ ಮಾಡುವ ಈ ಪೇಯ ಗಳನ್ನೂ ಮಕ್ಕಳಿಗೆ ಕುಡಿಸಲು ಆರಂಭಿಸಿದ ನಂತರ 4 ನೇ ತರಗತಿಯ ಹೆಣ್ಣು ಮಕ್ಕಳು ದೊಡ್ಡವರಾಗುತಿದ್ದರೆ,ಮಕ್ಕಳಲ್ಲಿ ಕ್ಯಾನ್ಸರ್ ಗಳು ,ಗರ್ಭಿಣಿಗೆ ಕುದಿಸಿದ ನಂತರ ಪ್ರಸವ ಪೂರ್ವ ಸಮಸ್ಯೆ ಗಳು ಹೆಚ್ಚಾಗಿರುವುದು,ಹುಟ್ಟಿದ ಮಕ್ಕಳ ಮಾನಸಿಕ ಮಟ್ಟ ಕಡಿಮೆ ಇರುವ ,ವಿಕಲಾಂಗ ಮಕ್ಕಳು ಹುಟ್ಟುತಿರುವ ಮಕ್ಕಳಲ್ಲಿ ಬರುತ್ತಿರುವ ಹೃದಯ ಸಂಬಂದಿ,ಕಾಯಿಲೆ ಎಲುಬು ಹಾಗು ಇನ್ನಿತರ ಕ್ಯಾನ್ಸರ್ ಇತ್ಯಾದಿ ಇತ್ತೀಚಿನ ದಿನ ಗಳಲ್ಲಿ ತೀರಾ ಅಧಿಕ ವಾಗಿರುವುದರ ಹಿಂದೆ ಇಂತಹ ಪೇಯ ,ಶಿಶು ಅಹಾರ,ಟೂತ್ ಪೇಸ್ಟ್ ಗಳು 3 ಮಿನ್ ಅಲ್ಲಿ ತಯಾರಾಗುವ ತಿಂಡಿ ಮುಖಕೈಕಾಲಿಗೆ ಬಳಸುವ ಕ್ರೀಮ್ ಗಳು ,ಿಷ ಯುಕ್ತ ಪರಿಮಳ ಗಳಿರುವ ಎಣ್ಣೆ ,ವಿಷ ಗಳನ್ನೇ ಹೊಂದಿರುವ ಪಟ್ಟಣ ದ ತಿಂಡಿ ಕಾರಣ ವಾಗಿರ ಬಾರದೇಕೆ ??ಈ ಗಂಭೀರ ವಿಷಯ ಗಳ ಬಗ್ಗೆ ಬೆಳಕು ಚೆಲ್ಲುವ ಡಾ.ಖಾದರ್,ರಾಜೀವ್ ಶುಕ್ಲರಂತಹ ನಿಜವಾದ ಹೀರೊ ಗಳು ಬೇಕಾಗಿದೆ ನಮ್ಮ ಸಮಾಜಕ್ಕೆ ……
ಹಿಂದೆ ಪೇಸ್ಟ್ ಅಲ್ಲಿ ಉಪ್ಪು ,ಇದ್ದಿಲು ಇತ್ಯಾದಿ ಉಪಯೋಗಿಸುವವರು ಅನಾಗರಿಕರು ಎಂದಿದ್ದ ಇದೇ ಕಂಪೆನಿ ಗಳು ಇಂದು ಉಪ್ಪು ,ಹರಸಿನ,ಬೇವು ,ಇದ್ದಿಲು ಇತ್ಯಾದಿ ಗಳನ್ನೂ ಬಳಸಿ ಕೊಂಡಿದೆ ಎಂದು ತಮ್ಮ ಪ್ರಾಡಕ್ಟ್ ಅಲ್ಲಿ ದೊಡ್ಡ ದೊಡ್ಡ ಚಿತ್ರ ಗಳ ಮೂಲಕ ಹೇಳಿ ಕೊಳ್ಳುತಿರುವುದು ,ಮಂತ್ರ ಶಕ್ತಿ ,ವೇದ ಶಕ್ತಿ ಎಂದೆಲ್ಲ ಹೆಸರು ಕೊಟ್ಟು ತಮ್ಮ ವಸ್ತು ಗಳನ್ನೂ ಮಾರಾಟ ಮಾಡುತಿರುವುದು ಮತ್ತೆ ನಮ್ಮ ಕಣ್ಣಿಗೆ ಮಣ್ಣೆರಚಲಷ್ಟೇ ಎನ್ನುವುದು ತಿಳಿಯಬೇಕಿದೆ..
ಇನ್ನು ಕೆಲವು ದುಃಖಕರ ಅಂಶ ಎಂದರೆ ಸ್ವದೇಶೀ ಮಂತ್ರ ಎಂದು ವ್ಯಾಪಾರ ಆರಂಭಿಸಿದ ಕೆಲವು ಸ್ವದೇಶೀ ಕಂಪೆನಿಗಳು ಕೂಡ ಬರಬರುತ್ತ ಇದೇ ವ್ಯಾಪಾರೀ ನೀತಿ ಅಳವಡಿಸಿಕೊಂಡು ..ವಿಷಯುಕ್ತ ವಸ್ತು ಗಳನ್ನೇ ಅಮೃತ ಎಂದು ಮಾರಿ ದುಡ್ಡು ಮಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ.ಸ್ವದೇಶೀ ಒಂದೇ ನಮ್ಮ ದ್ಯೇಯ ಮಂತ್ರ ವಾಗಿರದೆ ವಿಷ ರಹಿತ ಆಹಾರ ಮಾತ್ರ ದ್ಯೇಯ ಮಂತ್ರ ವಾಗಿರಿಸೋಣ.
?ಈ ಕೃತಕ ಬಣ್ಣ ( artificial colour),
?ಕೃತಕ ರುಚಿ ( artificial flavour),
?ಸಂರಕ್ಷಕ ( ಪ್ರೆಸೆರ್ವಾಟಿವ್ಸ್ ),
? ಅತಿಯಾದ ಸಕ್ಕರೆ ಹೊಂದಿರುವ
? ಮೈದಾ ಮಿಶ್ರಿತ ಆಹಾರ
? ಪ್ಯಾಕೆಟ್ ಹಾಲು
ಗಳನ್ನ ತ್ಯಜಿಸಿದರಷ್ಟೇ ನಾವು ನಮ್ಮ ಮುಂದಿನ ಪೀಳಿಗೆ ಯನ್ನು ರಕ್ಷಿಸಿಕೊಳ್ಳ ಬಹುದು … ಎಂಬ ಗಂಭೀರ ಸತ್ಯ ಬೇಗನೆ ಅರ್ತವಾಗಬೇಕಿದೆ
ಇಲ್ಲದೆ ಹೋದರೆ ಈ ಕಂಪೆನಿ ಗಳು …..ತಮ್ಮ ಪಂಚಿಂಗ್ ಡೈಲಾಗ್ ಗಳ ಮೂಲಕ ನಿಮ್ಮನ್ನು ಪಂಚರ್ ಮಾಡುವದರಲ್ಲಿ ಸಂಶಯವೇ ಇಲ್ಲ ಮುಂದೊಂದು ದಿನ
ನಿಮ್ಮ ಹಣ ನಮ್ಮದು, ಹೆಣ ನಿಮ್ಮದು??
ಎನ್ನುವ. ಪಂಚಿಂಗ್ ಡೈಲಾಗ್ ಬರುವ ಮುನ್ನ ಎಚ್ಚರ ವಾಗಿರೋಣವೇ ???
–ಡಾ.ಶಶಿಕಿರಣ್ ಶೆಟ್ಟ.
ಉಡುಪಿ