ಮಡಿಕೇರಿ: ಓದುವ ಮಕ್ಕಳ ಕೈಯಲ್ಲಿ ತ್ರಿಶೂಲ, ಬಂದೂಕು. ಶಸ್ತ್ರಾಸ್ತ್ರ ನೀಡಿ, ಬಳಕೆಯ ತರಬೇತಿ. ಪೆನ್ನಿಡಿವ ಕೈಯಲ್ಲಿ ಬಂದೂಕು, ಶಸ್ತ್ರಾಸ್ತ್ರ.! ಇದು ರಾಜ್ಯದಲ್ಲಿ ಈಗ ಮತ್ತೊಂದು ಎದ್ದಿರುವಂತ ಧರ್ಮ ದಂಗಲ್ ಆಗಿದೆ. ಶಾಲೆಯ ಆವರಣದಲ್ಲಿಯೇ ಭರಂಗದಳದಿಂದ ಇಂತದ್ದೊಂದು ತರಬೇತಿಯನ್ನು ನೀಡಿರುವ ಪೋಟೋಗಳು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.
ಹೌದು.. ಮಡಿಕೇರಿಯ ಪೊನ್ನಂಪೇಟೆಯಲ್ಲಿನ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಭಜರಂಗದಳದಿಂದ ಮಕ್ಕಳಿಗೆ ಶೌರ್ಯ ಪ್ರಶಿಕ್ಷಣ ತರಬೇತಿಯನ್ನು ನೀಡಲಾಗಿದೆ. ಮೇ.5 ರಿಂದ 11ರವರೆಗೆ ಹತ್ತು ದಿನಗಳು ನಡೆದಂತ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ಸಹಿತ ಭಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆಯನ್ನು ನೀಡಲಾಗಿದೆ.
ವಿಶ್ವ ಹಿಂದೂ ಪರಿಷತ್ ನ 119 ಪ್ರಶಿಕ್ಷಣಾರ್ಥಿಗಳು ಸಹಿತ 140 ಮಂದಿ ಈ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶಾಲಾ ಆವರಣದಲ್ಲಿಯೇ ಬಂದೂಕು ಹಿಡಿದು ತರಬೇತಿ ನೀಡಲಾಗಿದೆ. ತ್ರಿಶೂಲ ದೀಕ್ಷೆ ನೀಡಿರುವಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇನ್ನೂ ಇದಷ್ಟೇ ಅಲ್ಲದೇ ಈ ತರಬೇತಿ ಸಂದರ್ಭದಲ್ಲಿ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೂಡ ಶಿಬಿರದ ಸಂದರ್ಭದಲ್ಲಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಈ ಬಂದೂಕು ತರಬೇತಿ, ತ್ರಿಶೂಲ ದೀಕ್ಷೆ ಶಿಬಿರದಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.