Tuesday, September 28, 2021
HomeUncategorizedಆರೋಗ್ಯ ಇಲಾಖೆಯಿಂದ ನೆರೆಹಾವಳಿ ಪ್ರದೇಶಗಳಲ್ಲಿನ ಕಾಳಜಿ ಕೇಂದ್ರದಲ್ಲಿ ಇರುವವರ ಕೋವಿಡ್ ಪರೀಕ್ಷೆ ಹಾಗೂ ವಾಕ್ಸೀನೇಷನ್ ಗೆ...

ಆರೋಗ್ಯ ಇಲಾಖೆಯಿಂದ ನೆರೆಹಾವಳಿ ಪ್ರದೇಶಗಳಲ್ಲಿನ ಕಾಳಜಿ ಕೇಂದ್ರದಲ್ಲಿ ಇರುವವರ ಕೋವಿಡ್ ಪರೀಕ್ಷೆ ಹಾಗೂ ವಾಕ್ಸೀನೇಷನ್ ಗೆ ಆದೇಶ

- Advertisement -
Renault
- Advertisement -
Home Plus
- Advertisement -

ಬೆಂಗಳೂರು : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಉಂಟಾದ ನೆರೆ, ಪ್ರವಾಹದಿಂದಾಗಿ ಅನೇಕ ಮಂದಿ ಸರ್ಕಾರದ ಕಾಳಜಿ ಕೇಂದ್ರಗಳಲ್ಲಿ ನೆಲೆಸಿದ್ದು, ಅವರೆಲ್ಲರಿಗೂ ಕೋವಿಡ್ ಪರೀಕ್ಷೆ, ಲಸಿಕಾಕರಣಕ್ಕೆ ಆರೋಗ್ಯ ಇಲಾಖೆ ಆದೇಶಿಸಿದೆ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ, ಅಭಿಯಾನ ನಿರ್ದೇಶಕಿ ಅರುಂಧತಿಯವರು ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ರಾಜ್ಯದ ಕೆಲವು ಜಿಲ್ಲೆಗಳು ನೆರೆಹಾವಳಿಗೆ ತುತ್ತಾಗಿದ್ದು, ಅಂತಹ ಜಿಲ್ಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ಆರೋಗ್ಯ ಸೇವೆಗಳನ್ನು ನೀಡುತ್ತಿರುವುದು ಸರಿಯಾಗಿದೆ. ಈ ಕಾಳಜಿ ಕೇಂದ್ರಗಳಲ್ಲಿ ಕೋವಿಡ್-19 ಸೂಕ್ತ ನಡವಳಿಕೆಯ ಕುರಿತು ಜಾಗೃತಿ ಮೂಡಿಸುವುದು ಮತ್ತು ನಡವಳಿಕೆ ಪಾಲಿಸುವಿಕೆಯ ಅನುಸರಣೆ ಮಾಡುವುದು, ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವವರಿಗೆ ಕೋವಿಡ್ ಪರೀಕ್ಷೆ ಹಾಗೂ ಕಾಳಜಿ ಕೇಂದ್ರಗಳಲ್ಲಿ ದಾಖಲಾಗಿ ಸೇವೆ ಪಡೆಯುತ್ತಿರುವ ಅರ್ಹ ಫಲಾನುಭವಿಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಲಸಿಕಾಕರಣ ನಡೆಸಬೇಕು ಎಂದು ಸೂಚಿಸಿದ್ದಾರೆ.

ಕೋವಿಡ್-19 ಲಸಿಕಾಕರಣವನ್ನು ವೈದ್ಯಾಧಿಕಾರಿಗಳ ಉಪಸ್ಥಿತಿ ಮತ್ತು ಮೇಲ್ವಿಚಾರಣೆಯಡಿ ನಡೆಸುವುದು. ತರಬೇತಿ ಹೊಂದಿದ ನುರಿತ ವ್ಯಾಕ್ಸಿನೇಟರ್ ಗಳು ಲಸಿಕಾಕರಣ ಪ್ರಕ್ರಿಯೆಯನ್ನು ನಿರ್ವಹಿಸುವುದು. ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಲಸಿಕಾಕರಣವನ್ನು ನಡೆಸುವುದು ಮತ್ತು ಪ್ರತಿ ಕಾಳಜಿ ಕೇಂದ್ರದಲ್ಲಿ ಲಸಿಕೆಯ ಲಭ್ಯತೆ, ಎಇಎಫ್‌ಐ ಕಿಟ್ ಮತ್ತು ಅನಾಫಲಾಕ್ಷಿಸ್ ಕಿಟ್ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದು. ಯಾವುದೇ ಎಇಎಫ್‌ಐ ಪ್ರಕರಣ ಉಂಟಾದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಜಿಲ್ಲೆಗಳ ಕಾಳಜಿ ಕೇಂದ್ರಗಳಲ್ಲಿನ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ಲಸಿಕೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಮಾಹಿತಿ ನೀಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments