Wednesday, September 28, 2022
Homeಕ್ರೈಂಎಸ್ಐ ಗೇ ವಂಚಿಸಿದಾತ ಈಗ ಕಂಬಿ ಹಿಂದೆ!

ಎಸ್ಐ ಗೇ ವಂಚಿಸಿದಾತ ಈಗ ಕಂಬಿ ಹಿಂದೆ!

- Advertisement -
Renault

Renault

Renault

Renault






- Advertisement -

ಕಲಬುರಗಿ: SP ಹೆಸರು ಹೇಳಿ 8.5 ಲಕ್ಷ ಹಣ ಪಡೆದು ಪಿಎಸ್​ಐ ಯಾಮಾರಿಸಿದ್ದ ಕಿಲಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. PSI ಮಂಜುನಾಥ ಹೂಗಾರ್​ರಿಂದ 8.5 ಲಕ್ಷ ಹಣ ಪಡೆದು ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಮೋಸ ಮಾಡಿದ್ದಾನೆ. ಸದ್ಯ ಖಾಸಿಂನನ್ನು ಬಂಧಿಸಲಾಗಿದ್ದು ಆತನಿಂದ ಎರಡು‌ ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್​ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.

ಖಾಸಿಂ ಕಲಬುರಗಿ ಎಸ್​ಪಿ ಪರ್ಸನಲ್​ ನಂಬರ್​ ಎಂದು ಹೇಳಿ ಎಸ್​ಐ ಮಂಜುನಾಥ ಹೂಗಾರ್​ಗೆ SMS ಮಾಡುತ್ತಿದ್ದ.

ಮೊಬೈಲ್​ ನಂಬರ್​ 74114 47060ನಿಂದ SMS ಮಾಡ್ತಿದ್ದ. ಖಾಸಿಂ ಬೇರೆ ಬೇರೆ ಕಾರಣಗಳನ್ನು ಹೇಳಿ ಮಂಜುನಾಥ ಬಳಿ 3 ಬಾರಿ ಹಣ ಪಡೆದಿದ್ದ.

ಸುಮಾರು 8 ಲಕ್ಷ 50 ಸಾವಿರ ಹಣ ಪಡೆದಿದ್ದಾನೆ. ಫೆಬ್ರವರಿ 4ರಂದು ಎಸ್​ಪಿ ಭೇಟಿಯಾಗಿ ಹಣ ನೀಡಿದ್ದರ ಬಗ್ಗೆ ಮಂಜುನಾಥ್, ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ನಾನು ಯಾವುದೇ ಹಣ ಕೇಳಿಲ್ಲ, ಅದು ನನ್ನ ನಂಬರ್​ ಅಲ್ಲ ಅಂತ ಪಿಎಸ್​ಐ ಮಂಜುನಾಥ ಹೂಗಾರ್​ಗೆ, ಎಸ್​ಪಿ ತಿಳಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ ಫೆಬ್ರವರಿ 4ರ ರಾತ್ರಿ ಮಂಜುನಾಥ್ ಕಲಬುರಗಿ ಸ್ಟೇಷನ್ ​ಬಜಾರ್​ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ₹8 ಲಕ್ಷ 50ಸಾವಿರ ಪಡೆದಿದ್ದ ವಂಚಕ ಖಾಸಿಂ ಪಟೇಲ್​ನನ್ನು ಪೊಲೀಸರು ಬಂಧಿಸಿದ್ದು ಆತನಿಂದ ₹2 ಲಕ್ಷ ವಶಕ್ಕೆ ಪಡೆದಿದ್ದಾರೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments