Monday, October 2, 2023
HomeUncategorized34 ಸಾವಿರ ಹಣ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಪುತ್ರಿ…!!!!

34 ಸಾವಿರ ಹಣ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಪುತ್ರಿ…!!!!

- Advertisement -



Renault

Renault
Renault

- Advertisement -

ನವದೆಹಲಿ: ಇ-ಕಾಮರ್ಸ್ ಪೋರ್ಟಲ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮೋಸ ಹೋಗಿದ್ದಾರೆ.

ಹರ್ಷಿತಾ ಕೇಜ್ರಿವಾಲ್ ಗೆ ಸುಮಾರು 34 ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ. ವೆಬ್ ಪೋರ್ಟಲ್ ನಲ್ಲಿ ವ್ಯಕ್ತಿಯೋರ್ವ ಸೋಫಾ ಕೊಂಡುಕೊಳ್ಳುವುದಾಗಿ ಹರ್ಷಿತಾಳನ್ನು ಸಂಪರ್ಕಿಸಿದ್ದಾನೆ.

ನಂತರ ರೇಟ್ ಫಿಕ್ಸ್ ಆದ ಮೇಲೆ ವ್ಯಕ್ತಿ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಅದನ್ನು ತಿಳಿದುಕೊಳ್ಳಲು ಕ್ಯೂಆರ್ ಕೋಡ್ ಸ್ಕಾನ್ ಮಾಡುವಂತೆ ಹರ್ಷಿತಾಳಿಗೆ ಹೇಳಿದ್ದಾನೆ.

ಅದರಂತೆ ಹರ್ಷಿತಾ ಕ್ಯೂರ್ ಕೋಡ್ ಸ್ಕಾನ್ ಮಾಡಿದ ತಕ್ಷಣ ಮೊದಲಿಗೆ 20 ಸಾವಿರ ರುಪಾಯಿ ಖಾತೆಯಿಂದ ಕಡಿತವಾಗಿದೆ. ಇದನ್ನು ತಿಳಿದುಕೊಳ್ಳಲು ಹರ್ಷಿತಾ ಮತ್ತೆ ಆತನನ್ನು ಪ್ರಶ್ನಿಸಿದ್ದಾಳೆ.

ಆಗ ಆತ ತಪ್ಪು ಬಾರ್ ಕೋಡ್ ಕಳಿಸಿದ್ದೇನೆ ಮತ್ತೊಂದು ಬಾರ್ ಕೋಡ್ ಕಳಿಸಿ ಇದನ್ನು ಸ್ಕಾನ್ ಮಾಡಿ ಸರಿ ಹೋಗುತ್ತದೆ ಎಂದು ಹೇಳಿದ್ದಾಳೆ.

ಮತ್ತೆ 14 ಸಾವಿರ ರುಪಾಯಿ ಕಳೆದುಕೊಂಡ ನಂತರ ಹರ್ಷಿತಾಳಿಗೆ ತಾನು ಮೋಸ ಹೋಗಿರುವುದಾಗಿ ಗೊತ್ತಾಗಿ ಸಿವಿಲನ್ ಲೈನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments