ಕುಂದಾಪುರ : ಮಕ್ಕಳ ಅಪಹರಣಕ್ಕೆ ಯತ್ನಿಸಿದ್ದಾರೆನ್ನುವ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಎಂಬಲ್ಲಿ ನಡೆದಿದೆ.
ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡಟ್ಟು ಬಳಿಯಲ್ಲಿ ಮಕ್ಕಳನ್ನು ಅಹರಿಸಲು ಸಂಚು ರೂಪಿಸಿದ್ದಾರೆ. ಸ್ಥಳೀಯರು ಅಪರಿಚಿತರನ್ನು ಪ್ರಶ್ನಿಸಲು ಮುಂದಾದಾಗ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಬೈಕಿನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಆರೋಪಿಗಳನ್ನು ಬೆನ್ನಟ್ಟಿದ ಸ್ಥಳೀಯರು ಜಪ್ತಿ ಬಳಿಯಲ್ಲಿ ಇಬ್ಬರನ್ನು ಹಿಡಿದು ಕೋಟ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪೈಕಿ ಓರ್ವ ಯುವಕ ಕೋಟದವನಾಗಿದ್ದು, ಇನ್ನೋರ್ವ ಬೆಂಗಳೂರು ಮೂಲದವನು ಎನ್ನಲಾಗುತ್ತಿದೆ.
ಇನ್ನು ದುಷ್ಕರ್ಮಿಗಳು ಕೃತ್ಯಕ್ಕೆ ಕಳವು ಮಾಡಿದ ಬೈಕ್ ಬಳಕೆ ಮಾಡಿದ್ದಾರೆ. ಮಂಗಳೂರಿನ ಉರ್ವಾ ಠಾಣೆಯಲ್ಲಿ ಯುವಕರು ಬಂದಿದ್ದ ಬೈಕ್ ಕಳೆದು ಹೋಗಿರುವ ಕುರಿತು ದೂರು ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿರುವ ಕಂಡ್ಲೂರು ಠಾಣೆಯ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಮಕ್ಕಳನ್ನು ಅಪಹರಣ ಮಾಡುತ್ತಿದ್ದರು ಅನ್ನೋದು ಇನ್ನಷ್ಟೇ ತಿಳಿದುಬರಬೇಕಾಗಿದೆ.