Saturday, June 3, 2023
Homeಕರಾವಳಿಮತ್ತೆ ಬಬ್ಬುಸ್ವಾಮಿಗೆ ದ್ರೋಹ:ಕಾಂಡೋಮ್ ಹಾಕುವ ಮೂಲಕ ಅವಮಾನ

ಮತ್ತೆ ಬಬ್ಬುಸ್ವಾಮಿಗೆ ದ್ರೋಹ:ಕಾಂಡೋಮ್ ಹಾಕುವ ಮೂಲಕ ಅವಮಾನ

- Advertisement -


Renault

Renault
Renault

- Advertisement -

ಮಂಗಳೂರು : ಕಳೆದ ಕೆಲ ದಿನಗಳ ಹಿಂದೆಯಷ್ಟೇ ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿರುವ ಪ್ರಕರಣ ಮಾಸುವ ಮುನ್ನವೇ ಕರಾವಳಿಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಬ್ಬುಸ್ವಾಮಿ ದೇವರ ಕಾಣಿಕೆ ಹುಂಡಿಗೆ ಅವಹೇಳನಕಾರಿ ಬರಹದ ಜೊತೆಗೆ ಕಾಂಡೋಮ್ ಹಾಕಿ ವಿಕೃತಿ ಮೆರೆಯಲಾಗಿದೆ.

ಮಂಗಳೂರು ನಗರ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದಡ್ಡಲ್ ಕಾಡ್ ನಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅವಹೇಳನಕಾರಿ ಬರಹ ಮತ್ತು ಕಾಂಡೋಮ್ ಪತ್ತೆಯಾಗಿದ್ದು ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡುವ ಪ್ರಯತ್ನ ನಡೆದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಷ್ಟೇ ಇಂತಹದ್ದೇ ಕಾರ್ಯ ನಡೆದಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments