Sunday, May 28, 2023
Homeಕರಾವಳಿಚೌತಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ :ಓವೈಸಿ ಕಿಡಿ

ಚೌತಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ :ಓವೈಸಿ ಕಿಡಿ

- Advertisement -


Renault

Renault
Renault

- Advertisement -

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ನಿರ್ಧಾರವನ್ನು ಖಂಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಕರ್ನಾಟಕ ಸರ್ಕಾರದ ಈ ಆದೇಶವು ಭಾರತೀಯ ಸಂವಿಧಾನದ ಉಲ್ಲಂಘನೆಯಾಗಿದೆ. ಯಾರು ಏನು ಧರಿಸುತ್ತಾರೆ ಮತ್ತು ತಿನ್ನುತ್ತಾರೆ ಎಂಬುದು ಅವರ ಸ್ವಂತ ಆಯ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿದೆ. ಕರ್ನಾಟಕದ ಜನಸಂಖ್ಯೆಯ 80% ಜನರು ಮಾಂಸ ತಿನ್ನುತ್ತಾರೆ ಎಂದು ಹೇಳಿದರು.

ಒಂದೆಡೆ ದೊಡ್ಡ ರೆಸ್ಟೋರೆಂಟ್‌ಗಳು ಮಾಂಸಾಹಾರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಪ್ರಾಮಾಣಿಕ ಜೀವನವನ್ನು ನಡೆಸಲು ಪ್ರಯತ್ನಿಸುವ ಸಣ್ಣ ಪುಟ್ಟ ವ್ಯಾಪಾರಿಗಳು ತೊಂದರೆಗೊಳಗಾಗುತ್ತಾರೆ, ಇದು ಅತ್ಯಂತ ತಪ್ಪು ನಿರ್ಧಾರವಾಗಿದೆ ಎಂದು ಒವೈಸಿ ಟೀಕಿಸಿದ್ದಾರೆ.

- Advertisement -

1 COMMENT

  1. ಕರ್ನಾಟಕ ದ ಜನರ ಬಗ್ಗೆ OYC ತಲೆ ಕೆಡಿಸಿ ಕೊಳ್ಳುವ ಅಗತ್ಯ ವಿಲ್ಲ. ಇಲ್ಲಿಯ ಜನರನ್ನು 80% – 20% ಎಂದು ವಿಭಾಗಿಸಿ ಮಾತನಾಡುವ ಅಗತ್ಯವಿಲ್ಲ. ನಿಮ್ಮ ಸ್ವಂತದ ದುರುದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದು ಮಾತನಾಡಿ ಹಬ್ಬದ ವಾತಾವರಣವನ್ನು ಹಾಳು ಮಾಡಬೇಡಿ

LEAVE A REPLY

Please enter your comment!
Please enter your name here

Most Popular

Recent Comments