Sunday, November 28, 2021
Homeಕ್ರೈಂದೆಹಲಿಯಲ್ಲಿ ಬೆಂಗಳೂರು ಮೂಲದ ಉಗ್ರ ಮೊಹಮ್ಮದ್ ತಾಕೀರ್ ಬಂಧನ... ಉಗ್ರನ ನೆಟ್ ವರ್ಕ್ ತಿಲಿದ್ರೆ ಬಿಚ್ಚಿ...

ದೆಹಲಿಯಲ್ಲಿ ಬೆಂಗಳೂರು ಮೂಲದ ಉಗ್ರ ಮೊಹಮ್ಮದ್ ತಾಕೀರ್ ಬಂಧನ… ಉಗ್ರನ ನೆಟ್ ವರ್ಕ್ ತಿಲಿದ್ರೆ ಬಿಚ್ಚಿ ಬೀಳ್ತಿರಾ

- Advertisement -
Renault
- Advertisement -
Bliss
- Advertisement -

ಬೆಂಗಳೂರು: ದೆಹಲಿಯಲ್ಲಿ ಉಗ್ರ ಮೊಹಮ್ಮದ್ ತಾಕೀರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಉಗ್ರ ತಾಕೀರ್ ಬೆಂಗಳೂರಲ್ಲಿ ತನ್ನದೇ ಜಾಲ ಸೃಷ್ಟಿಸಿಕೊಂಡಿದ್ದ ಎಂಬ ಬಗ್ಗೆ ಮಾಹಿತಿ ಪತ್ತೆಯಾಗಿದೆ.

ಕಳೆದ ಒಂದು ವರ್ಷದಿಂದ ಎನ್‌ಐಎ ಮಾಸ್ಟರ್ ಮೈಂಡ್ ತಾಕೀರ್ನ ತಲಾಶ್ ನಡೆಸುತ್ತಿತ್ತು. ಸದ್ಯ ತಾಕೀರ್ ಬಂಧನವಾಗಿದ್ದು ಮಹತ್ವದ ಮಾಹಿತಿ ಸಿಕ್ಕಿದೆ. ಐಸಿಸ್‌ಗೆ ಸೇರುವಂತೆ ಯುವಕರನ್ನು ಪ್ರಚೋದಿಸ್ತಿದ್ದ ತಾಕೀರ್ ಬೆಂಗಳೂರಿನಲ್ಲಿ ದಂತ ವೈದ್ಯನಾಗಿ ಕೆಲಸ ಮಾಡುತ್ತಿದ್ದ.

ತಾಕೀರ್, ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ಮಾಡಿದ್ದ. 2020ರಲ್ಲಿ ನೇತ್ರ ವೈದ್ಯ ಅಬ್ದುರ್ ರೆಹಮಾನ್ನನ್ನು ಬೆಂಗಳೂರಿನ ಬಸವನಗುಡಿಯ ಅಪಾರ್ಟ್ಮೆಂಟ್ ಪ್ಲಾಟ್ನಲ್ಲಿ NIA ಬಂಧಿಸಿತ್ತು. ಅಬ್ದುರ್ ರೆಹಮಾನ್‌ಗೂ ಮೊಹಮ್ಮದ್ ತಾಕೀರ್‌ಗೂ ನಂಟಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಮೊಹಮ್ಮದ್ ತಾಕೀರ್, ಅಬ್ದುರ್ ರೆಹಮಾನ್ ಸೇರಿ ಐವರನ್ನ ಸಿರಿಯಾಗೆ ಕಳಿಸಿದ್ದ. ವಿದ್ಯಾವಂತರನ್ನೇ ಟಾರ್ಗೆಟ್ ಮಾಡಿ ಐಸಿಸ್‌ಗೆ ಸೇರಿಸುತ್ತಿದ್ದ. ವಿಡಿಯೋ ತೋರಿಸಿ ಯುವಕರ ಬ್ರೈನ್‌ವಾಶ್ ಮಾಡ್ತಿದ್ದ. ಟೆಕ್ನಿಕಲ್ ಆಗಿ ಐಸಿಸ್‌ಗೆ ನೆರವಾಗಲು ಟೀಂ ರಚನೆಗೆ ಪ್ಲ್ಯಾನ್ ಮಾಡಿದ್ದ. ಅಲ್ಲದೆ ಉಗ್ರ ತಾಕೀರ್ ತನ್ನ ಸ್ವತಃ ಟೀಂ ಕಟ್ಟುವುದಕ್ಕೆ ಕೂಡ ಪ್ಲ್ಯಾನ್ ಮಾಡಿದ್ದ. ನೇತ್ರ ವೈದ್ಯ ಡಾ.ಅಬ್ದುರ್ ರೆಹಮಾನ್, ಅಬ್ದುಲ್ ಖಾದರ್, ಇರ್ಫಾನ್ ನಾಸೀರ್ ಸೇರಿ ಏಳು ಜನರನ್ನ ಸಂಘಟಿಸಿದ್ದ. ಸಿರಿಯಾದಲ್ಲಿ ನಡೆಯುತ್ತಿದ್ದ ಅಮೆರಿಕಾ ಮತ್ತು ಐಸಿಸ್ ವಾರ್ ವಿಡಿಯೋಗಳನ್ನ ತೋರಿಸಿ ಪ್ರಚೋದನೆ ಮಾಡ್ತಿದ್ದ. ಉಗ್ರ ತಾಕೀರ್ ದೇಶಾದ್ಯಂತ ನೆಟ್‌ವರ್ಕ್ ಬಿಲ್ಡ್ ಮಾಡಿದ್ದ. ಆಯಪ್ ಅಭಿವೃದ್ಧಿ ಮಾಡಲು ಜುಬೈದ್ ಹಮೀದ್ ಸಾಥ್ ನೀಡಿದ್ದ. ಸದ್ಯ ಉಗ್ರ ತಾಕೀರ್ ಅರೆಸ್ಟ್ ಆಗಿದ್ದು ನಾಪತ್ತೆಯಾದ ಜುಬೈದ್ ಹಮೀದ್‌ಗಾಗಿ ಶೋಧಕಾರ್ಯ ನಡೆಯುತ್ತಿದೆ.

ಉಗ್ರ ತಾಕೀರ್, ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದಲ್ಲಿ ವಾಸವಿದ್ದ. ಬೆಂಗಳೂರು ಟೂ ದೆಹಲಿ ಟೂ ದುಬೈ ಟೂ ಸಿರಿಯಾಗೆ ತೆರಳುವ ಯುವಕರಿಗೆ ದುಬೈನಲ್ಲಿ ನೆರವು ಸಿಗುವಂತೆ ಮಾಡ್ತಿದ್ದ. 2014 ರಲ್ಲಿ ಡಾ.ಅಬ್ದುರ್ ರೆಹಮಾನ್ ಸಿರಿಯಾಗೆ ಕಳಿಸಿದ್ದ. ಡಾ.ಅಬ್ದುರ್ ದುಬೈಗೆ ತೆರಳಿ ಅಲ್ಲಿಂದ ಗಡಿದಾಟಿ ಸಿರಿಯಾದಲ್ಲಿ 10 ದಿನ ಉಳಿದಿದ್ದ. ಡಾ.ಅಬ್ದುರ್ ರೆಹಮನ್ ಮತ್ತಿತರಿಗೆ ಪ್ರಾಥಮಿಕ ತರಬೇತಿ ಕೊಡಿಸಿದ್ದ.

- Advertisement -
Home Plus

LEAVE A REPLY

Please enter your comment!
Please enter your name here

- Advertisment -

Most Popular

Recent Comments