Tuesday, June 6, 2023
HomeUncategorizedಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟಿರೋ ಸತ್ಯ ಇನ್ನೂ ಹಲವು :ಡ್ರಗ್ಸ್ ಮಾಫಿಯಾ ರಹಸ್ಯ!

ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟಿರೋ ಸತ್ಯ ಇನ್ನೂ ಹಲವು :ಡ್ರಗ್ಸ್ ಮಾಫಿಯಾ ರಹಸ್ಯ!

- Advertisement -


Renault

Renault
Renault

- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸರು ಸೌತ್ ಬಾಯ್ಸ್ ಗಾಗಿ ಬಲೆ ಬೀಸಿದ್ದು, ರಾಜಕಾರಣಿಗಳು ಹಾಗೂ ಸ್ಟಾರ್ ನಟರ ಮಕ್ಕಳಿಗೆ ಕಂಟಕ ಎದುರಾಗಿದೆ.

ಡ್ರಗ್ಸ್ ಮಾಫಿಯಾದಿಂದಾಗಿ ಈಗಾಗಲೇ ಸ್ಯಾಂಡಲ್ ವುಡ್ ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು, ಸರಕಾರಿಗಳು ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ಕರಿನೆರಳು ಸದ್ಯಕ್ಕೆ ಮುಗಿಯೋ ಲಕ್ಷಣಗಳು ಗೋಚರಿಸುತ್ತಿಲ್ಲ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ವಿಚಾರಣೆಯ ವೇಳೆಯಲ್ಲಿ ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿರುವ ಸಿಸಿಬಿ ಸೌತ್ ಬಾಯ್ಸ್ ಕುರಿತು ಮಾಹಿತಿಯನ್ನು ಕಲೆ ಹಾಕಿದೆ. ಅಷ್ಟಕ್ಕೂ ಸೌತ್ ಬಾಯ್ಸ್ ಅನ್ನೋದು ವಾಟ್ಸಾಪ್ ಗ್ರೂಪ್. ವೀಕೆಂಡ್ ನಲ್ಲಿ ಡ್ರಗ್ಸ್ ಪಾರ್ಟಿ ಮಾಡೋ ಸಲುವಾಗಿಯೇ ಸೌತ್ ಬಾಯ್ಸ್ ಗ್ರೂಪ್ ಆರಂಭಿಸಲಾಗಿತ್ತು. ಈ ಗ್ರೂಪ್ ನಲ್ಲಿ ಸ್ಟಾರ್ ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ನಟ ನಟಿಯರು ಸೇರಿದಂತೆ ಹಲವರ ಹೆಸರುಗಳಿವೆ. ಪ್ರತೀ ವಾರ ಯಾವ ಕಡೆಯಲ್ಲಿ ಪಾರ್ಟಿ ಮಾಡಬೇಕು ಅನ್ನೋ ಕುರಿತು ನಿರ್ಧಾರ ಮಾಡುತ್ತಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ಈ ಬಗ್ಗೆ ಸಿಸಿಬಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿರುವವರ ಮೊಬೈಲ್ ಡೇಟಾ ರೀಟ್ರಿವ್ ವೇಳೆಯಲ್ಲಿ ಹಲವು ದಾಖಲೆಗಳು ಲಭ್ಯವಾಗಿದೆ. ಅದ್ರಲ್ಲೂ ಲಾಕ್ ಡೌನ್ ವೇಳೆಯಲ್ಲಿಯೇ ಸೌತ್ ಬಾಯ್ಸ್ ಅತೀ ಹೆಚ್ಚು ಪಾರ್ಟಿಯನ್ನು ನಡೆಸಿರೋದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಕಾಟರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಸಿದ್ದತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments