Tuesday, June 6, 2023
HomeUncategorizedಮನೆ ಮಾಲೀಕನ ಮೇಲೆ ದ್ವೇಷ: ಬಾಡಿಗೆ ಮನೆಯವನ ಬೈಕ್ ಗೆ ಬೆಂಕಿ!

ಮನೆ ಮಾಲೀಕನ ಮೇಲೆ ದ್ವೇಷ: ಬಾಡಿಗೆ ಮನೆಯವನ ಬೈಕ್ ಗೆ ಬೆಂಕಿ!

- Advertisement -


Renault

Renault
Renault

- Advertisement -

ಬೆಂಗಳೂರು: ಮನೆ ಮಾಲೀಕನ ಮೇಲಿನ ದ್ವೇಷಕ್ಕೆ ಬಾಡಿಗೆದಾರನ ಬೈಕ್‌ಗೆ ಬೆಂಕಿ ಹಚ್ಚಿ ಪ್ರತಿಕಾರ ತೀರಿಸಿಕೊಂಡ ಘಟನೆ ಬೆಂಗಳೂರಿನ ಗೆದ್ದಲಹಳ್ಳಿಯಲ್ಲಿ ನಡೆದಿದೆ.

ಮನೆ ಮಾಲೀಕ ಮುನಿರಾಜುವಿನೊಂದಿಗೆ ಕುಡಿದ ಅಮಲಿನಲ್ಲಿ ಏರಿಯಾ ಹುಡುಗರು ಜಗಳವಾಡಿಕೊಂಡಿದ್ದು, ಅದೇ ದಿನ ಮಧ್ಯರಾತ್ರಿ ಮುನಿರಾಜು ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಿದ್ದಾರೆ. ದುಷ್ಕರ್ಮಿಗಳ ಪುಂಡಾಟಕ್ಕೆ 2 ಬೈಕ್‌ಗಳು ಅಗ್ನಿಗಾಹುತಿಯಾಗಿವೆ.

ಮುನಿರಾಜು ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಂಜುನಾಥ್ ಮನೆಯ ಮುಂಭಾಗದಲ್ಲಿ ಬೈಕ್​ ನಿಲ್ಲಿಸಿದ್ದು, ದುಷ್ಕರ್ಮಿಗಳು ಜನವರಿ 28ರ ನಡುರಾತ್ರಿ ಮಂಜುನಾಥ್ ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಸಂಜಯನಗರ ಠಾಣೆಯಲ್ಲಿ ಮಂಜುನಾಥ್ ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments