Tuesday, September 28, 2021
Homeಕರಾವಳಿರಾಜ್ಯದಲ್ಲಿ ಕೊರೋನಾ ರಣಕೇಕೆ ವಿಧಾನಸೌಧ, ವಿಕಾಸಸೌಧಕ್ಕೆ ನೋ ಎಂಟ್ರಿ!ದ.ಕ ಜಿಲ್ಲೆ ಗೆ ಬಿಸಿ ಮುಟ್ಟಿ ಸಿದ...

ರಾಜ್ಯದಲ್ಲಿ ಕೊರೋನಾ ರಣಕೇಕೆ ವಿಧಾನಸೌಧ, ವಿಕಾಸಸೌಧಕ್ಕೆ ನೋ ಎಂಟ್ರಿ!ದ.ಕ ಜಿಲ್ಲೆ ಗೆ ಬಿಸಿ ಮುಟ್ಟಿ ಸಿದ ಕರೋನ

- Advertisement -
Renault
- Advertisement -
Home Plus
- Advertisement -

ರಾಜ್ಯದಲ್ಲಿ ಕೊರೋನಾ ರಣಕೇಕೆ
ವಿಧಾನಸೌಧ, ವಿಕಾಸಸೌಧಕ್ಕೆ ನೋ ಎಂಟ್ರಿ!

ದ.ಕ ಜಿಲ್ಲೆ ಗೆ ಬಿಸಿ ಮುಟ್ಟಿ ಸಿದ ಕರೋನ.

ಮಾಸ್ಕ್ ದರಿಸದೇ ಇರುವ ಜನರಿಂದ ದಂಡ ವಸೂಲಿ ಮಾಡಿದ ಜಿಲ್ಲಾಡಳಿತ

ಬೆಂಗಳೂರು/ಮಂಗಳೂರು:ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.


ವಿಧಾನಸೌಧ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ
ಮೊದಲಿದ್ದ 3. 30ರ ಸಾರ್ವಜನಿಕರ ಪ್ರವೇಶಕ್ಕೂ ಕೆಲ ನಿಯಮಗಳು ಜಾರಿ ಮಾಡಲಾಗಿದೆ. ಸಚಿವರ ಆಪ್ತ ಕಾರ್ಯದರ್ಶಿಗಳಿಂದ ಪ್ರವೇಶ ಪತ್ರದ ಅನುಮತಿಯಿದ್ದರೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತೆ. ರೆಫರೆನ್ಸ್ ಇಲ್ಲದೇ ಯಾರೂ ವಿಧಾನಸೌಧಕ್ಕೆ ಭೇಟಿ ನೀಡುವಂತಿಲ್ಲ ಅಂತಾ ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನೇ ದಿನೇ ವ್ಯಾಪಕವಾಗಿ ಹಬ್ಬುತ್ತಿದ್ದು, ಕಳೆದ ಮೂರು ದಿನದಿಂದ ಪಾಸಿಟಿವ್
ಪ್ರಕರಣ ಪತ್ತೆ ಸಂಖ್ಯೆ 100 ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.ಶನಿವಾರ 309 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಕೋವಿಡ್ ನಿಂದ ಒಬ್ಬರು ಮೃತಪಟ್ಟಿದ್ದಾರೆ. 99 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 37871 ಕ್ಕೆ ಏರಿಕೆಯಾಗಿದೆ. ಈ ಪೈಕಿ 1623 ಸಕ್ರಿಯ ಪ್ರಕರಣಗಳು. 35504 ಮಂದಿ ಗುಣಮುಖರಾಗಿದ್ದಾರೆ. 744 ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯ ಆಗಿದ್ದು ಇದುವರೆಗೆ ಒಟ್ಟು 46098 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 47 86330 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments