ನಿಮಗೆ ಬ್ಯಾಂಕ್ ಸಂಬಂಧಿತ ಕೆಲಸಗಳಿದ್ದರೆ ಇಂದೇ ವಿಲೇವಾರಿ ಮಾಡಿ. ಏಕೆಂದರೆ ನಾಳೆಯಿಂದ 5 ದಿನ ಬ್ಯಾಂಕ್ ಬಂದ್.
ಹೌದು.. ಮಾರ್ಚ್ 11 ಮಹಾ ಶಿವರಾತ್ರಿ. ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ರಜಾ ದಿನವಾಗಿರುತ್ತದೆ. ಮಾರ್ಚ್ 13 ತಿಂಗಳ ಎರಡನೇ ಶನಿವಾರವಾಗಿದ್ದು, ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ಮಾರ್ಚ್ 14 ವಾರದ ರಜೆ. ಇನ್ನು ಮಾರ್ಚ್ 15 ಮತ್ತು 16 ಬ್ಯಾಂಕ್ ಮುಷ್ಕರ ನಡೆಯಲಿದೆ. ಮಾರ್ಚ್ 12 ರಂದು ಎಂದಿನಂತೆ ಬ್ಯಾಂಕ್ ಸೇವೆ ಲಭ್ಯವಿದೆ.
ಕೇಂದ್ರ ಸರ್ಕಾರ ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಖಾಸಗೀಕರಣಕ್ಕೆ ಮುಂದಾಗಿರುವುದಕ್ಕೆ ವಿರೋಧಿಸಿ ಬ್ಯಾಂಕ್ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿವೆ.
Such issues will not be there if banks are privatised.