Monday, September 26, 2022
HomeUncategorizedತಂಗಿಗೆ ಐಸ್ ಕ್ರೀಂ ತರಲಿಲ್ಲವೆಂದು ಬೈದ ಅಪ್ಪ…!!!

ತಂಗಿಗೆ ಐಸ್ ಕ್ರೀಂ ತರಲಿಲ್ಲವೆಂದು ಬೈದ ಅಪ್ಪ…!!!

- Advertisement -
Renault

Renault

Renault

Renault


- Advertisement -

ಮನನೊಂದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!

ಬಂಟ್ವಾಳದಲ್ಲಿ ನಡೆದ ಘಟನೆ.

ಬಂಟ್ವಾಳ : ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದು ಮಾತ್ರವಲ್ಲ, ತಂಗಿಗೆ ಐಸ್ ಕ್ರಿಮ್ ತರಲಿಲ್ಲ ಅನ್ನೋ ಕಾರಣಕ್ಕೆ ಪೋಷಕರು ಬೈದಿದ್ದಾರೆ. ಇಷ್ಟಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಾಳ್ತಿಲ ಗ್ರಾಮದ ಚೇರ್ಕಳದಲ್ಲಿ ನಡೆದಿದೆ.

ಶಂಭೂರು ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಹರ್ಷಿತ್ ( 14 ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಾತ್ರೆಗೆ ತೆರಳಿದ್ದ ಹರ್ಷಿತ್ ಮನೆಗೆ ತಡವಾಗಿ ಬಂದಿದ್ದಾನೆ. ಪೋಷಕರು ಬುದ್ದಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಹರ್ಷಿತ್ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಹರ್ಷಿತ್ ಈ ಹಿಂದೆಯೂ ಕೂಡ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಬಂಟ್ವಾಳ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments