Wednesday, September 28, 2022
HomeUncategorizedಪ್ರಪಾತಕ್ಕೆ ಉರುಳಿ ಬಿದ್ದ ಪೊಲೀಸ್ ಜೀಪ್..!! ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್ ಐಗೆ...

ಪ್ರಪಾತಕ್ಕೆ ಉರುಳಿ ಬಿದ್ದ ಪೊಲೀಸ್ ಜೀಪ್..!! ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್ ಐಗೆ ಗಾಯ.!!

- Advertisement -
Renault

Renault

Renault

Renault


- Advertisement -

ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್ ಐಗೆ ಗಾಯ…!!!

ಬಂಟ್ವಾಳ: ಪೊಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಆಳಕ್ಕೆ ಬಿದ್ದು SI ಹಾಗೂ ಚಾಲಕ
ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.


ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ. ಸಂಜೀವ ಹಾಗೂ ಚಾಲಕ ಸತೀಶ್ ಗಾಯಗೊಂಡವರು.


ಗಾಯಗೊಂಡ ಇಬ್ಬರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿ ಲಾಗಿದೆ.

ಘಟನೆಯ ವಿವರ
ಬೆಳಿಗ್ಗೆ ಸುಮಾರು 4.30
ರ ವೇಳೆ ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಕಡೆಗೆ ಗ್ರಾಮಾಂತರ ಎಸ್.ಐ. ಸಂಜೀವ ಹಾಗೂ ಸತೀಶ್ ಅವರು ನೈಟ್ ರೌಂಡ್ಸ್ ನ ಡ್ಯೂಟಿಯಲ್ಲಿ ತೆರಳುವ ವೇಳೆ ಬಿ.ಸಿ.ರೋಡಿನ ಸರ್ಕಲ್ ಬಳಿಯ ಮಸೀದಿಯ ಎದುರು ಗಡೆ ದನವೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳಕ್ಕೆ ಜೀಪ್ ಉರುಳಿ ಬಿದ್ದಿದೆ.


ಘಟನೆಯಲ್ಲಿ ಎಸ್.ಐ.ಹಾಗೂ ಚಾಲಕ ಇಬ್ಬರಿಗೂ ಗಾಯಗಳಾಗಿದೆ.


ವಾಹನ ಕೆಳಗೆ ಬೀಳುವ ದೃಶ್ಯವನ್ನು ನೋಡಿದ ವಾಹನವೊಂದರ ಯುವಕರು ಅದೇ ಸಮಯದಲ್ಲಿ ಬರುತ್ತಿದ್ದ ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments