Friday, May 14, 2021
Homeಕರಾವಳಿಅಡ್ಯಾರ್ ನ ಬರಖಾ ಇಂಟರ್ ನ್ಯಾಷನಲ್ ಸ್ಕೂಲ್ ಆಗಲಿದೆ "ತಾತ್ಕಾಲಿಕ ಆಸ್ಪತ್ರೆ"…!!!.ಕೊರೋನ ಸಂಕಷ್ಟ ಕಾಲದಲ್ಲಿಯೂ ನೆರವಿನ...

ಅಡ್ಯಾರ್ ನ ಬರಖಾ ಇಂಟರ್ ನ್ಯಾಷನಲ್ ಸ್ಕೂಲ್ ಆಗಲಿದೆ “ತಾತ್ಕಾಲಿಕ ಆಸ್ಪತ್ರೆ”…!!!.ಕೊರೋನ ಸಂಕಷ್ಟ ಕಾಲದಲ್ಲಿಯೂ ನೆರವಿನ ಹಸ್ತ ಚಾಚಿದ ಶೈಕ್ಷಣಿಕ ಸಂಸ್ಥೆಗೆ ಸಾರ್ವಜನಿಕರ ಮೆಚ್ಚುಗೆ.

- Advertisement -
Rental
Rental
- Advertisement -Home Plus
- Advertisement -
Platform
Maya Builders

ಮಂಗಳೂರು: ಕರೋನ ಎರಡನೇ ಅಲೆಯಿಂದ ನಮ್ಮ ರಾಜ್ಯ ದಲ್ಲಿ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲದೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಈ ಸಂಕಷ್ಟ ಕಾಲದಲ್ಲಿ ಮಾನವೀಯ ನೆಲೆಯಲ್ಲಿ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ
ಅಡ್ಯಾರ್ ನ ಬರಖಾ ಇಂಟರ್ ನ್ಯಾಷನಲ್ ಸ್ಕೂಲ್ ನ ಶಾಲಾ ಮುಖ್ಯಸ್ಥರು ತಮ್ಮ ಶಾಲೆಯನ್ನು ತಾತ್ಕಾಲಿಕ ಆಸ್ಪತ್ರೆಯನ್ನಾಗಿಸಲು ಮುಂದಾಗಿದ್ದಾರೆ.

ಈಗಾಗಲೇ ಕೊರೋನ ಹಾವಳಿ ಯಿಂದ ಶಾಲೆಗಳಲ್ಲಿ ತರಗತಿಗಳು ಬಂದ್ ಆಗಿದೆ.ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ಆಸ್ಪತ್ರೆ ಯಲ್ಲಿ ಬೆಡ್ ಸಿಗದೆ ಪ್ರಾಣ ಕಳಕೊಳ್ಳುವವರಿಗೆ ನೆರವಾಗಲು 20 ಬೆಡ್ ಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ.ಈ ಶೈಕ್ಷಣಿಕ ಸಂಸ್ಥೆಯ ಸಾಮಾಜಿಕ ಕಳಕಳಿಗೆ ಜನರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದೇ ಮಾದರಿಯಲ್ಲಿ ನಮ್ಮ ರಾಜ್ಯದ ವಿವಿಧ ಕಡೆಗಳಲ್ಲಿ ವಿವಿಧ ಶಾಲೆಗಳ ಆಡಳಿತ ಮಂಡಳಿಗಳು,ದಾರ್ಮಿಕ ಸಂಸ್ಥೆಗಳು, ಸಂಘ- ಸಂಸ್ಥೆಗಳು, ತಾತ್ಕಾಲಿಕ ಆಸ್ಪತ್ರೆಯ ನಿರ್ಮಾಣ ಕ್ಕೆ ಮನಸ್ಸು ಮಾಡಿದರೆ ಕೊರೋನ ಸಂಕಷ್ಟ ದ ದಿನಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ಮತ್ತು ನಮ್ಮ ಜಿಲ್ಲೆಯಲ್ಲಿ ಆಸ್ಪತ್ರೆ ಯಿಂದ ಆಸ್ಪತ್ರೆ ಗೆ ಬೆಡ್ ಸಿಗದೆ ಅಲೆದಾಡುವ ರೋಗಿಗಳಿಗೆ ಮಹದುಪಕಾರವಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments