Wednesday, May 31, 2023
Homeಕರಾವಳಿಮೋರ್ಗನ್ಸ್ ಗೇಟ್ - ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ಮೋರ್ಗನ್ಸ್ ಗೇಟ್ – ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

- Advertisement -


Renault

Renault
Renault

- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯ ಭಾಗವಾಗಿ ವಿತರಣಾ ಜಾಲವನ್ನು ಬಲಪಡಿಸುವ ಮೋರ್ಗನ್ಸ್ ಗೇಟಿನಲ್ಲಿ 6.25 ಕೋಟಿ ವೆಚ್ಚದ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಮನುಷ್ಯನ ಜೀವನಕ್ಕೆ ಅತೀ ಅಗತ್ಯ ವಸ್ತುಗಳಲ್ಲಿ ಒಂದಾಗಿರುವ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಯೋಜನೆಯು ಪ್ರಗತಿಯ ಹಂತದಲ್ಲಿದೆ. ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗೂ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸಲು ಪ್ರಪ್ರಥಮವಾಗಿ ವಿತರಣಾ ಜಾಲಗಳನ್ನು ಬಲಪಡಿಸುವುದು ಅತೀ ಅಗತ್ಯ. ಈ ನಿಟ್ಟಿನಲ್ಲಿ 6.25 ಕೋಟಿ ವೆಚ್ಚದ 25 ಲಕ್ಷ ನೀರು ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೇವೆ ಎಂದರು.

ಈ ಟ್ಯಾಂಕಿನಿಂದ ಹೈೂಗೆಬಜಾರ್, ಪೋರ್ಟ್ ವಾರ್ಡ್, ಜಪ್ಪಿನಮೊಗರು, ಅತ್ತಾವರ, ಮಂಗಳಾದೇವಿ, ಬೋಳಾರ ಹಾಗೂ ಜೆಪ್ಪುವಾರ್ಡಿಗೆ ಈ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಮುಖ್ಯಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅದ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರಾದ ಭಾನುಮತಿ, ರೇವತಿ, ವೀಣಾ ಮಂಗಳ, ಶೈಲೇಶ್ ಶೆಟ್ಟಿ ಅತ್ತಾವರ, ಭರತ್ ಕುಮಾರ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ದೀಪಕ್ ಪೈ, ಕಿರಣ್ ರೈ ಬಜಾಲ್, ಯೋಗಿಶ್ ಜೆಪ್ಪು, ಪ್ರಶಾಂತ್ ರಾವ್,ಶಿವಪ್ರಸಾದ್ ಬೋಳಾರ್, ದಿನೇಶ್ ಕರ್ಕೇರ,ಸುಧೀಂದ್ರ, ಅಜಿತ್ ಡಿ. ಸಿಲ್ವಾ, ಪ್ರಶಾಂತ್, ಪ್ರಶಾಂತ್ ರಾವ್, ರಾಜೇಂದ್ರ ಬಿ.ವಸಂತ್ ಜೆ ಪೂಜಾರಿ, ವಸಂತ್, ಸುಜಾತ ಆಳ್ವ, ಸುರೇಶ್ ಪಾಂಡೇಶ್ವರ ಹಾಗೂ ಬಿಜೆಪಿ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments