Thursday, July 29, 2021
Homeಕರಾವಳಿಪುತ್ತೂರಿನಲ್ಲಿ ಬೈಕ್ – ಓಮ್ನಿ ಢಿಕ್ಕಿ : ಬೈಕ್ ಸವಾರ ಗಂಭೀರ

ಪುತ್ತೂರಿನಲ್ಲಿ ಬೈಕ್ – ಓಮ್ನಿ ಢಿಕ್ಕಿ : ಬೈಕ್ ಸವಾರ ಗಂಭೀರ

- Advertisement -
usha-jewellers
- Advertisement -Home Plus

ಪುತ್ತೂರು : ಬನ್ನೂರು ಸಮೀಪ ಬೈಕ್ ಮತ್ತು ಮಾರುತಿ ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಬೆಳ್ಳಿಪ್ಪಾಡಿಯ ಧನಂಜಯ ಗೌಡ ಎಂಬವರು ತೀವ್ರ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಬನ್ನೂರು ಆಯೋಧ್ಯಾನಗರ ಶಿವಪಾರ್ವತಿ ಮಂದಿರ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಬೆಳ್ಳಿಪ್ಪಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಧನಂಜಯ ಗೌಡ ಅವರು ವಿವೇಕಾನಂದ ಕಾಲೇಜು ರಸ್ತೆಯಾಗಿ ಪಡೀಲ್ ಕಡೆ ಬೈಕ್ ಚಲಾಯಿಸುತ್ತಿದ್ದ ವೇಳೆ ಬನ್ನೂರು ಮಸೀದಿ ಬಳಿ ಅವರ ಮೊಬೈಲ್ ಬಿದ್ದು ಹೋಗಿತ್ತು. ಬಿದ್ದ ಮೊಬೈಲ್ ತಾನು ಪಡೆದು ಬಳಿಕ ಬೈಕ್ ಚಲಾಯಿಸಿ ಮುಂದೆ ಹೋಗುತ್ತಿದ್ದಂತೆ ಬನ್ನೂರು ಶಿವಪಾರ್ವತಿ ಮಂದಿರದ ಬಳಿ ಹಂಪ್ಸ್ ಬಳಿ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಮಾರುತಿ ಓಮ್ನಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರ ಧನಂಜಯ್ ಅವರು ತೀವ್ರ ಗಾಯಗೊಂಡಿದ್ದರು. ತಕ್ಷಣ ಸ್ಥಳಿಯರಾದ ಹಂಝ ಮತ್ತು ರಫೀಕ್ ಅವರು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರು ಅಸ್ಪತ್ರೆಗೆ ಕೆರೆದೊಯ್ದಿದ್ದಾರೆ.

- Advertisement -

Renault

LEAVE A REPLY

Please enter your comment!
Please enter your name here

- Advertisment -

Most Popular

Recent Comments