Sunday, September 24, 2023
HomeUncategorizedಸಮ್ಮಿಶ್ರ ಸರಕಾರ ಪತನವಾಗ್ತಾ ಇರ್ಲಿಲ್ಲ : ಆಕಾಂಕ್ಷಿ ಮಂತ್ರಿ ಹೇಳಿಕೆ

ಸಮ್ಮಿಶ್ರ ಸರಕಾರ ಪತನವಾಗ್ತಾ ಇರ್ಲಿಲ್ಲ : ಆಕಾಂಕ್ಷಿ ಮಂತ್ರಿ ಹೇಳಿಕೆ

- Advertisement -Renault

Renault
Renault

- Advertisement -

ಬೆಂಗಳೂರು, (ಫೆ.09): ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ನಾನು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅಚ್ಚರಿ ಹೇಳಿಕೆ ನೀಡಿದರು.

ವಿಧಾನಪರಿಷತ್‌ನಲ್ಲಿ ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸಿ ಮಾತನಾಡಿದ ವಿಶ್ವನಾಥ್, ನಾವಿಬ್ಬರು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಹೇಳಿದರು. ಈ ವೇಳೆ ಸದನದಲ್ಲಿ ನಗೆಯ ಅಲೆ ತೇಲಿ ಬಂದಿತು.

ಚುನಾವಣೆ ಕಣದಿಂದ ಕೈ ಹಿಂದಕ್ಕೆ: ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ

ಕಾಂಗ್ರೆಸ್ ಸದಸ್ಯರ ಸಹಕಾರದಿಂದ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೀರಿ. ಹೊರಟ್ಟಿ ಎಂಬ ಶಬರಿ ಶಾಪವನ್ನು ಬಿಜೆಪಿಯ ಶ್ರೀರಾಮ ವಿಮೋಚನೆ ಮಾಡಿದ್ದಾರೆ ಎಂದು ವಿಶ್ವನಾಥ್ ಹೇಳುತ್ತಿದ್ದಂತೆಯೇ ಮತ್ತೆ ಸದನದಲ್ಲಿ ನಗೆಯ ಅಲೆ ಎದ್ದಿತು.

ಸಭಾಪತಿ ಹೊರಟ್ಟಿ ಹಾಗೂ ನಾನು ಜೆಡಿಎಸ್‍ನಲ್ಲಿದ್ದವರೇ. ಮರಿತಿಬ್ಬೇಗೌಡ ಅವರು ಮಾತನಾಡುವಾಗ, ಹೊರಟ್ಟಿಯವರು ಮಂತ್ರಿಯಾಗಬೇಕಿತ್ತು ಎಂದಿದ್ದರು. ಆದರೆ ಅದು ಆಗಲಿಲ್ಲ. ಕಾಂಗ್ರೆಸ್ ನನ್ನ ಪೂರ್ವಾಶ್ರಮ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಸಚಿವನಾಗಿದ್ದೆ. ಆಗ ನೀವು ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕ ವೃತ್ತಿಯಿಂದ ಬಂದವರು ಏಳು ಬಾರಿ ಸೋಲಿಲ್ಲದ ಸರದಾರರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು, ನಿಮ್ಮನ್ನು ಮೇಲ್ಪಂಕ್ತಿಗೆ ಹಾಕುವ ಮೂಲಕ ಮೌಲ್ಯಗಳನ್ನು ಕಾಪಾಡುವ ದೊಡ್ಡ ಜವಾಬ್ದಾರಿಯಿದೆ ನಿಮ್ಮ ಮೇಲಿದೆ ಎಂದು ಹೇಳಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments