Monday, October 2, 2023
Homeರಾಜಕೀಯಗಲಾಟೆ-ಗದ್ದಲದ ನಡುವೆಯೇ ನಟ ಜಗ್ಗೇಶ್ ಬಿಜೆಪಿ ವಕ್ತಾರರಾಗಿ ನೇಮಕ...!!! ಬಿಜೆಪಿ ರಾಜ್ಯಾಧ್ಯಕ್ಷ ನಳೀನ್...

ಗಲಾಟೆ-ಗದ್ದಲದ ನಡುವೆಯೇ ನಟ ಜಗ್ಗೇಶ್ ಬಿಜೆಪಿ ವಕ್ತಾರರಾಗಿ ನೇಮಕ…!!! ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ…!!!

- Advertisement -



Renault

Renault
Renault

- Advertisement -

ಬೆಂಗಳೂರು: ದರ್ಶನ್​ ಅಭಿಮಾನಿಗಳ ಗಲಾಟೆ-ಗದ್ದಲಗಳ ನಡುವೆಯೇ ಮಾಜಿ ಶಾಸಕರಾಗಿರುವ ನಟ ಜಗ್ಗೇಶ್​ ಅವರನ್ನು ಬೆಂಗಳೂರು ವಕ್ತಾರರನ್ನಾಗಿ ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ.

ಆಡಿಯೋ ಕ್ಲಿಪ್​ ವಿಷಯವೊಂದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್​ ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳ ನಡುವಿನ ಗಲಾಟೆ ಕಳೆದ ಮೂರುನಾಲ್ಕು ದಿನಗಳಿಂದ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಈ ನಡುವೆ ಟ್ವೀಟರ್​ ಹಾಗೂ ಪತ್ರಿಕಾಗೋಷ್ಟಿ ನಡೆಸಿದ ಹಿರಿಯ ನಟ ಜಗ್ಗೇಶ್​ ದರ್ಶನ್​ ಅಭಿಮಾನಿಗಳು ತೋರಿದ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಗಲಾಟೆ-ಗದ್ದಲಗಳ ನಡುವೆಯೇ ಮಾಜಿ ಶಾಸಕರಾಗಿರುವ ನಟ ಜಗ್ಗೇಶ್​ ಅವರನ್ನು ಬೆಂಗಳೂರು ವಕ್ತಾರರನ್ನಾಗಿ ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ. ಇದರ ಜೊತೆ ತೇಜಸ್ವಿನಿ ಗೌಡ ಅವರನ್ನು ಕೂಡ ಬೆಂಗಳೂರು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳೀನ್​ ಕುಮಾರ್​ ಕಟೀಲ್​ ಈ ಆದೇಶ ಹೊರಡಿಸಿದ್ದಾರೆ. ಬೆಳಗಾವಿ, ಮೈಸೂರು, ಯಾದಗಿರಿ, ಮಂಗಳೂರಿಗೆ ವಕ್ತಾರರನ್ನಾಗಿ 10 ಮಂದಿಯನ್ನು ನೇಮಿಸಿ ಆದೇಶ ಪ್ರಕಟಿಸಲಾಗಿದೆ.

2008ರಲ್ಲಿ ತುರುವೇಕರೆ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೆದಿದ್ದ ಅವರು, ಬಳಿಕ ಭಾರತೀಯ ಜನತಾ ಪಕ್ಷ ಸೇರಿದ್ದರು.  2018ರಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮೂಲಕ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಬಿಜೆಪಿ ತಾರಾ ಪ್ರಚಾರಕರಾಗಿರುವ ಅವರಿಗೆ ಈಗ  ಪಕ್ಷ ಮತ್ತೊಂದು ಜವಾಬ್ದಾರಿ ನೀಡಿದೆ.

ಪಕ್ಷದ ಜೊತೆ ಸಿನಿಮಾರಂಗದಲ್ಲಿ ಸಕ್ರಿಯಾರಾಗಿರುವ ಜಗ್ಗೇಶ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 40 ವಸಂತಗಳನ್ನು ಪೂರೈಸಿರುವ ಅವರು, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಜೆಪಿ ಪ್ರಕಟಿಸಿರುವ ವಕ್ತಾರರ ಪಟ್ಟಿ ಇಂತಿದೆ….

ಕ್ಯಾ. ಗಣೇಶ್​ ಕಾರ್ಣಿಕ್​- ಮಂಗಳೂರು- ಮುಖ್ಯ ವಕ್ತಾರರು

ಜಗ್ಗೇಶ್​- ಬೆಂಗಳೂರು- ವಕ್ತಾರರು

ರಾಜೂಗೌಡ (ನರಸಿಂಹನಾಯಕ್​)- ಯಾದಗಿರಿ- ವಕ್ತಾರರು

ಚಲವಾದಿ ನಾರಾಯಣಸ್ವಾಮಿ- ಬೆಂಗಳೂರು- ವಕ್ತಾರರು

ತೇಜಸ್ವಿನಿ ಗೌಡ- ಬೆಂಗಳೂರು- ವಕ್ತಾರರು

ಗಿರಿಧರ ಉಪಾಧ್ಯಾಯ- ಬೆಂಗಳೂರು- ವಕ್ತಾರರು

ಎಂ.ಬಿ ಜಿರಲಿ- ಬೆಳಗಾವಿ- ವಕ್ತಾರರು

ಶ್ರೀ ಮಹೇಶ್​- ಮೈಸೂರು- ವಕ್ತಾರರು

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ನೀಡಬೇಕು. ಈ ಮೂಲಕ ಬಡವರ ಅಭಿವೃದ್ಧಿ ನಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದ ಶಾಸಕ ರಾಜೂಗೌಡ ಅವರನ್ನು ಕೂಡ ಯಾದಗಿರಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆವರೆಗೂ ಅಂದರೆ 2023ರವರೆಗೆ ಇವರು ಈ ಜವಾಬ್ದಾರಿ ನಿರ್ವಹಿಸಲಿದ್ದು, ಪಕ್ಷದ ಪರ ಕೆಲಸ ನಿರ್ವಹಿಸಲಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments