Wednesday, May 31, 2023
HomeUncategorizedಬಾಲಕಿಯ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್ ಮೇಲ್: ಓರ್ವ ಬಂಧನ

ಬಾಲಕಿಯ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್ ಮೇಲ್: ಓರ್ವ ಬಂಧನ

- Advertisement -


Renault

Renault
Renault

- Advertisement -

ಬಂಟ್ವಾಳ: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಬೆತ್ತಲೆ ಪೋಟೋ ಕ್ಲಿಕ್ಕಿಸಿ ಆಕೆಗೆ ಬೆದರಿಕೆ ಒಡ್ಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳನ್ನು ಅಬೂಬಕ್ಕರ್ ಸಿದ್ದಿಕ್ ಮತ್ತು ಚಪ್ಪಿ ಎಂದು ಗುರುತಿಸಲಾಗಿದ್ದು ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 2020ರ ಜನವರಿ ತಿಂಗಳಿನಲ್ಲಿ ಆರೋಪಿ ಅಬೂಬಕ್ಕರ್‌ ಸಿದ್ದಿಕ್‌ ಆತನ ಸ್ನೇಹಿತ ಚಪ್ಪಿ ಎಂಬವರು ಫೋನ್‌ ಮುಖಾಂತರ ಬಾಲಕಿಯ ಜತೆ ಸಲುಗೆಯಿಂದ ಮಾತನಾಡಿ ಜ.25ರ ರಾತ್ರಿ ಮನೆಯಿಂದ ಹೊರಬರಲು ಹೇಳಿದ್ದರು.

ಈ ವೇಳೆ ಬಾಲಕಿ ಹೊರಬಂದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ವೇಳೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ದುರುಳರು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಫೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಹೆದರಿಸಿದ್ದರು.

ಇಬ್ಬರೂ ಪರಾರಿಯಾಗಿದ್ದು, ಆರೋಪಿಗಳಿಗಾಗಿ ವಿಟ್ಲ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments