ಬ್ಲಡ್ ಡೋನರ್ಸ್ ಫಾರಂ ಕೈಕಂಬ – ಪರ್ಲಿಯ ವತಿಯಿಂದ ರಕ್ತದಾನ ಶಿಬಿರ
ಹೆಚ್ಚು ರಕ್ತದಾನ ಮಾಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ..
ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೈಕಂಬ ವಲಯ ಹಾಗೂ ಪರ್ಲಿಯ ವಲಯದ
ವತಿಯಿಂದ ಕೆ.ಎಸ್ ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಸಹಯೋಗದಲ್ಲಿ ಕೆ.ಎಮ್ ಶರೀಫ್ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವನ್ನು ಬಿ.ಸಿ ರೋಡು ಪರ್ಲಿಯ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಪರ್ಲಿಯ ವಲಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಹಿಸಿದ್ದರು. ಅರಫಾ ಜುಮಾ ಮಸ್ಜಿದ್ ಪರ್ಲಿಯ ಖತೀಬರಾದ ಮೌಲಾನ ಯಾಸಿರ್ ಅರಫಾತ್ ಅನ್ಸಾರಿ ದುವಾ ಆಶಿರ್ವಚನಗೈದರು.
ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ತಾಲೂಕು ಸಮಿತಿ ಸದಸ್ಯ ಸಿದ್ದೀಕ್ ಕಲ್ಲಡ್ಕ ಮಾತನಾಡಿ ನಾವು ಇತರರಿಗಾಗಿ ಬದುಕಿದಾಗ ನಮ್ಮ ಬದುಕು ಯಶಸ್ವಿಯಾಗಲು ಸಾಧ್ಯ ಅದೇ ರೀತಿ ಇಂತಹ ಸಮಾಜಮುಖಿ ಕಾರ್ಯವು ಇಂದಿನ ಅಗತ್ಯತೆಯಾಗಿದೆ. ಸ್ವಇಚ್ಛೆಯಿಂದ ರಕ್ತದಾನ ಮಾಡುತ್ತಾರೋ ಅವರೇ ರಕ್ತದಾನ ಶಿಬಿರದ ನಿಜವಾದ ರೂವಾರಿಗಲಾಗಿದ್ದಾರೆ. ಅಲ್ಲದೆ ಕೊರೋನ ಸಂದರ್ಭಗಳಲ್ಲಿ ತನ್ನ ಜೀವಕ್ಕಿಂತಲೂ ಇತರರ ಜೀವ ಬದುಕುಳಿಯಬೇಕು ಎಂದು ಪ್ರಾಮಾಣಿಕವಾಗಿ ಪ್ರಯತ್ನಿಸುವ ವೈದ್ಯರ ಕೆಲಸ ಶ್ಲಾಘನೀಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಪಾಪ್ಯುಲರ್ ಫ್ರಂಟ್ ಬಿ.ಸಿ ರೋಡು ಡಿವಿಝನ್ ಅಧ್ಯಕ್ಷರಾದ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ ಸಂಘಟನೆ ಇಂತಹ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೊರೋನಾ ಸಂದರ್ಭಗಳಲ್ಲಿ ದೇಶಾದ್ಯಂತ ಕೋವಿಡ್ ದಫಣ ಕಾರ್ಯಗಳನ್ನು ನಡೆಸಿ ರಾಷ್ಟ್ರದಾದ್ಯಂತ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಈ ಕಾರ್ಯಗಳು ಮುಂದೆ ನಿರಂತರವಾಗಲಿದೆ ಎಂದರು. ಕೆ.ಎಸ್ ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ವೈದ್ಯಾಧಿಕಾರಿಣಿ ಡಾ.ಅಭಿನಾ ಮಾತನಾಡಿದರು.
ಈ ಸಂದರ್ಭದಲ್ಲಿ ಕೋವಿಡ್ ಸಮಯ ತಮ್ಮ ಜೀವದ ಹಂಗು ತೊರೆದು ಜನರ ನಿರಂತರ ಚಿಕಿತ್ಸೆ ಮಾಡಿದ ಸ್ಥಳಿಯ ವೈದ್ಯಾಧಿಕಾರಿ ಡಾ. ಸರೇಂದ್ರ ನಾಯಕ್ ಹಾಗೂ ಅತೀ ಹೆಚ್ಚು ರಕ್ತದಾನ ಮಾಡಿದ ಶಾಹುಲ್ ತಲಪಾಡಿ, ಅನ್ಸಾರ್ ನಂದರಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪರ್ಲಿಯಾ ನರ್ಸಿಂಗ್ ಹೋಮ್ ವೈದ್ಯಾಧಿಕಾರಿಗಳಾದ ಡಾ.ಸೋಮೇಶ್, ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಹಿಮಾನ್ ಗೂಡಿನಬಳಿ, ಮೊಹಿಯುದ್ದೀನ್ ಜುಮಾ ಮಸ್ಜಿದ್ ಮಿತ್ತಬೈಲ್ ಅಧ್ಯಕ್ಷರಾದ ಮುಹಮ್ಮದ್ ಸಾಗರ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೈಕಂಬ ವಲಯ ಅಧ್ಯಕ್ಷರಾದ ರಫೀಕ್ ಶಾಂತಿಅಂಗಡಿ ಉಪಸ್ಥಿತರಿದ್ದರು. ಅಶ್ರಫ್ ಬಿ.ಎಮ್.ಟಿ ಸ್ವಾಗತಿಸಿದರು, ಅನ್ವರ್ ಕೆ.ಎಚ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.