Friday, May 14, 2021
Homeಕರಾವಳಿಮೇ,9 ರಂದು ಬಂಟ್ವಾಳ ವಿದಾನಸಭಾ ವಲಯ ಕಾಂಗ್ರೆಸ್ ವತಿಯಿಂದ ಬಿ.ಸಿ ರೋಡ್ ನಲ್ಲಿ ರಕ್ತದಾನ ಶಿಬಿರ:...

ಮೇ,9 ರಂದು ಬಂಟ್ವಾಳ ವಿದಾನಸಭಾ ವಲಯ ಕಾಂಗ್ರೆಸ್ ವತಿಯಿಂದ ಬಿ.ಸಿ ರೋಡ್ ನಲ್ಲಿ ರಕ್ತದಾನ ಶಿಬಿರ: ರಮಾನಾಥ ರೈ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಬಂಟ್ವಾಳ: ಕೊರೋನ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ, ಕೊರೋನ ನಿಯಂತ್ರಣಕ್ಕೆ 18ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆ ನೀಡಲು ಸರಕಾರ ಚಿಂತಿಸಿರುವ ಹಿನ್ನೆಲೆಯಲ್ಲಿ, ಕೋವಿಡ್ ಲಸಿಕೆ ಪಡೆದ ವ್ಯಕ್ತಿ 60 ದಿನಗಳ ಕಾಲ ರಕ್ತದಾನ ನಿಶಿದ್ದವಾದುದರಿಂದ ಕೋವಿಡ್ ಸಮಯದಲ್ಲಿ ರಕ್ತದ ಅವಶ್ಯಕತೆ ಪೂರೈಸಲು ಬಂಟ್ವಾಳ ವಿದಾನಸಭಾ ವಲಯದ ಎಲ್ಲಾ ಕಾಂಗ್ರೆಸ್ ಘಟಕಗಳ ಒಗ್ಗೂಡುವಿಕೆಯಲ್ಲಿ ಮೇ 9ನೇ ಆದಿತ್ಯವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಬಿ.ಸಿ ರೋಡ್ ನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ರಕ್ತದಾನ ಶಿಬಿರ ಆರೋಜಿಸಲಾಗಿದೆ ಎಂದು ಮಾಜಿ ಸಚಿವ ಬಿ .ರಮಾನಾಥ ರೈಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ವಿದಾನಸಭಾ ವಲಯ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಬಂಟ್ವಾಳ ಮತ್ತು ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್, ಬಂಟ್ವಾಳ ಮತ್ತು ಪಾಣೆಮಂಗಳೂರು ಯುವ ಕಾಂಗ್ರೆಸ್ ಸಹಭಾಗಿತ್ವ ದಲ್ಲಿ ಜರಗುವ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸುವ ರಕ್ತದಾನಿಗಳು ,ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಮೊದಲಾದ ಕೋವಿಡ್ ನ ಎಲ್ಲಾ ನಿಯಮಗಳನ್ನು ಪಾಲಿಸುವುದು.ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಈ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಕ್ತದಾನ ಶಿಬಿರ ಯಶಸ್ವಿ ಗೊಳಿಸುವಂತೆ ಬಿ.ರಮಾನಾಥ ರೈಯವರು ಎಲ್ಲಾ ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments