- Advertisement -
ನವದೆಹಲಿ : ಈ ಬಾರಿಯ ಬಜೆಟ್ ನಲ್ಲಿ ವಾಹನ ರದ್ದಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ಹೀಗಾಗಿ ಇನ್ನುಂದೆ 20 ವರ್ಷಗಳಷ್ಟು ಹಳೆಯದಾಗಿರುವ ವಾಹನಗಳು ಗುಜರಿಗೆ ಸೇರಲಿವೆ.
ವಾಯು ಮಾಲಿನ್ಯ ತಡೆಯ ಜೊತೆಗೆ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟ ಕ್ರಮವನ್ನು ಕೈಗೊಂಡಿದೆ.
ಬಾರಿಯ ಬಜೆಟ್ ನಲ್ಲಿ ವಾಹನ ರದ್ದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಗೆ ಹಾಕಲು ಆದ್ಯತೆ ನೀಡಲಾಗುತ್ತದೆ.
ಹಳೆಯ ವಾಹನಗಳನ್ನು ಗುಜರಿಗೆ ಹಾಕುವವರಿಗೆ ಕೇಂದ್ರ ಸರಕಾರ ಪ್ರೋತ್ಸಾಹ ಧನವನ್ನು ಕೂಡ ನೀಡಲಿದ್ದು, ಹೊಸ ವಾಹನದ ಖರೀದಿಗೆ ಉತ್ತೇಜಿಸಲಾಗುತ್ತಿದೆ.