Saturday, June 3, 2023
HomeUncategorizedಈ ಬಾರಿ ಮಂಡನೆಯಾಗಲಿದೆ ಕಾಗದ ರಹಿತ ಬಜೆಟ್ : ಕೇಂದ್ರ ಬಜೆಟ್ ಆಪ್ ನಲ್ಲಿ ಮಾಹಿತಿ

ಈ ಬಾರಿ ಮಂಡನೆಯಾಗಲಿದೆ ಕಾಗದ ರಹಿತ ಬಜೆಟ್ : ಕೇಂದ್ರ ಬಜೆಟ್ ಆಪ್ ನಲ್ಲಿ ಮಾಹಿತಿ

- Advertisement -


Renault

Renault
Renault

- Advertisement -

ನವದೆಹಲಿ : ಕೊರೊನಾ ಸಂಕಷ್ಟದ ಕಾಲದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅದ್ರಲ್ಲೂ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಗದ ರಹಿತ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಯ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ ಕೋವಿಡ್ -19 ನಿಯಮಾವಳಿಯ ಪ್ರಕಾರ ಈ ಬಾರಿ ಬಜೆಟ್ ಪ್ರತಿ ಮುದ್ರಿಸಲಾಗಿಲ್ಲ. ಹೀಗಾಗಿ ಬಜೆಟ್ ಕಾಗದ ರಹಿತ ಮುದ್ರಣ ಪ್ರತಿಗಳಿರುವುದಿಲ್ಲ. ಸಂಸದರಿಗೆ ಬಜೆಟ್ ಪ್ರತಿಗಳನ್ನು ನೀಡಲು ಹೊಸದಾಗಿ ಕೇಂದ್ರ ಬಜೆಟ್ ಮೊಬೈಲ್ ಆಪ್ ಆರಂಭಿಸಲಾಗಿದೆ.

ಕೇಂದ್ರ ಬಜೆಟ್ ನಲ್ಲಿ ಮಂಡಿಕೆಯಾಗುವ ಎಲ್ಲಾ 14 ದಾಖಲೆಗಳು ಕೂಡ ಆಪ್ ನಲ್ಲಿ ಲಭ್ಯವಾಗಲಿದೆ. ಕೇಂದ್ರ ಬಜೆಟ್ ಆಪ್ ಆಂಡ್ರಾಯ್ಡ್ ಹಾಗೂ ಐಓಸ್ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಲಭ್ಯವಾಗಲಿದೆ. ಕೇಂದ್ರ ಬಜೆಟ್ ಆಪ್ ನ್ನು ಕೇಂದ್ರ ಬಜೆಟ್ ವೆಬ್ ಸೈಟ್ ನಿಂದ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ ಬಳಿಕ ಬಜೆಟ್ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments