Friday, May 14, 2021
Homeಕರಾವಳಿಅನಾಥವಾಗಿ ರೈಲು ನಿಲ್ದಾಣದಲ್ಲಿ ಸಿಕ್ಕಿದ್ದ ಮೂಗಿ…!!!ನಾಲ್ಕು ದಶಕದಿಂದ ಈಕೆಗೆ ಠಾಣೆಯೇ ಮನೆ…!!!

ಅನಾಥವಾಗಿ ರೈಲು ನಿಲ್ದಾಣದಲ್ಲಿ ಸಿಕ್ಕಿದ್ದ ಮೂಗಿ…!!!ನಾಲ್ಕು ದಶಕದಿಂದ ಈಕೆಗೆ ಠಾಣೆಯೇ ಮನೆ…!!!

- Advertisement -
Rental
Rental
- Advertisement -Home Plus
- Advertisement -
Platform
Maya Builders

ಅನಾಥವಾಗಿ ರೈಲು ನಿಲ್ದಾಣದಲ್ಲಿ ಸಿಕ್ಕಿದ್ದ ಮೂಗಿ…!!!

ನಾಲ್ಕು ದಶಕದಿಂದ ಈಕೆಗೆ ಠಾಣೆಯೇ ಮನೆ…!!!

ಇದು ಮಂಗಳೂರಿನ ಬಂದರು ಠಾಣೆಯ ಮಮತೆ ಮಿಡಿತದ ಕಥೆ…!!!

ಮಂಗಳೂರು: ಕೆಲ ಮಂದಿ ಅದ್ಯಾವೊದೋ ಕಾರಣದಿಂದ ಮನೆ ಬಿಟ್ಟು ಬೀದಿ ಪಾಲಾಗಿರ್ತಾರೆ. ಅದೇ ರೀತಿ ನಾಲ್ಕೂ ದಶಕದ ಹಿಂದೆ ಅನಾಥವಾಗಿದ್ದ ಯುವತಿಗೆ ಇಲ್ಲೊಂದು ಪೊಲೀಸ್ ಠಾಣೆಯ ಸಿಬ್ಬಂದಿಗಳೇ ಕುಟುಂಬ ಸದಸ್ಯರಾಗಿದ್ದಾರೆ. ಯಸ್ ಅನಾಥ ಯುವತಿ ಇದೀಗ 60 ವಯಸ್ಸಿನ ಮಹಿಳೆಯಾಗಿದ್ದು ನಾಲ್ಕೂ ದಶಕದಿಂದ ಈಕೆಗೆ ಠಾಣೆಯೇ ಮನೆಯಾಗಿದೆ.

ಹೌದು..ಪೊಲೀಸ್ ಠಾಣೆಯಲ್ಲಿ ಸ್ವಚ್ಛತೆ, ಪೊಲೀಸರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿರುವ ಈ ಮಹಿಳೆಯ ಹೆಸರು ಹೊನ್ನಮ್ಮ. ಇವರ ಮೂಲ ಹೆಸರು ಏನೆಂಬುದು ಯಾರಿಗು ಗೊತ್ತಿಲ್ಲ. ಯಾಕಂದ್ರೆ ಈ ಮಹಿಳೆಗೆ ಕಿವಿನೂ ಕೇಳಿಸಲ್ಲ, ಮಾತು ಬರಲ್ಲ. ಇವಳ ವಿಳಾಸ ಯಾವುದೆಂದೆ ಗೊತ್ತಿಲ್ಲ. ಆದ್ರೆ ನಲ್ವತ್ತು ವರ್ಷದಿಂದ ಈ ಮಹಿಳೆಗೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯೆ ಮನೆ. ಇಲ್ಲಿನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳೆ ಬಂಧು ಬಳಗ.

https://youtu.be/6JuarztkoqM

ಈ ಮಹಿಳೆಗೆ ಪೊಲೀಸರೇ ಹೊನ್ನಮ್ಮ ಎಂಬ ಹೆಸರನ್ನು ಇಟ್ಟಿದ್ದಾರೆ. ಇಪ್ಪತ್ತು ವರ್ಷದ ಯುವತಿಯಾಗಿದ್ದಾಗ ಮಂಗಳೂರು ರೈಲ್ವೇ ನಿಲ್ಧಾಣದಲ್ಲಿ ಸಿಕ್ಕಿದ್ದರು. ಬೀದಿ ಪಾಲಾಗಿದ್ದ ಈಕೆಯನ್ನು ಆಗಿನ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆಯಿಂದ ಠಾಣೆಯಲ್ಲಿ ಆಶ್ರಯ ನೀಡಿದ್ದರು. ಆರಂಭದಲ್ಲಿ ಈಕೆಗೆ ಚಿಕಿತ್ಸೆ ನೀಡಿ ಕುಟಂಬಸ್ಥರ ಪತ್ತೆಗೆ ನಡೆಸಿದ ಪ್ರಯತ್ನ ಸಫಲವಾಗಿಲ್ಲ. ಹೀಗಾಗಿ ನಲ್ವತ್ತು ವರ್ಷದಿಂದಲೂ ಈಕೆಗೆ ಠಾಣೆಯೆ ಮನೆಯಾಗಿದೆ.

ಮೂಗಿ,ಕಿವುಡಿಯಾದ್ರು ಹೊನ್ನಮ್ಮನದು ಚುರುಕಿನ ವ್ಯಕ್ತಿತ್ವ. ಠಾಣೆಯನ್ನು ಶುಚಿಗೊಳಿಸುವ, ಪೊಲೀಸರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಾರೆ. ಮಾನವೀಯತೆ ನೆಲೆಯಲ್ಲಿ ಠಾಣೆಯ ಹಿಂಭಾಗದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಊಟ ತಿಂಡಿಯನ್ನು ಪೊಲೀಸರು ನೀಡುತ್ತಿದ್ದು, ಒಮ್ಮೊಮ್ಮೆ ಇವರೇ ಅಡುಗೆ ತಯಾರಿಸಿಕೊಳ್ಳುತ್ತಾರೆ. ಇದರ ಜೊತೆ ಹೊನ್ನಮ್ಮ ಬ್ಯಾಂಕ್ ಖಾತೆ, ಮತದಾರರ ಚೀಟಿ, ಆಧಾರ್ ಕಾರ್ಡ್ ಹೊಂದಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಪೊಲೀಸ್ ಠಾಣೆಯದ್ದೆ ಖಾಯಂ ವಿಳಾಸವಿದೆ. ಪೊಲೀಸರು ವಿಶೇಷ ಸಂದರ್ಭದಲ್ಲಿ ಈಕೆಗೆ ಹಣ ಕೊಡುತ್ತಾರೆ, ಮಾಡಿದ ಕೆಲಸಕ್ಕೆ ವೇತನವನ್ನು ನೀಡುತ್ತಾರೆ. ಈ ಎಲ್ಲಾ ಹಣವನ್ನು ದುಂದುವೆಚ್ಚ ಮಾಡದೇ ಬ್ಯಾಂಕ್ ಖಾತೆ ಜಮಾ ಮಾಡುತ್ತಾರೆ.

ಪೊಲೀಸ್ ಇಲಾಖೆಯ, ಸಿಬ್ಬಂದಿಗಳ ಮನೆಯಲ್ಲಿ ಕಾರ್ಯಕ್ರಮವಿದ್ದರೆ ಇವರಿಗೆ ಗೊತ್ತಾಗುತ್ತೆ. ಹೊಸ ಸೀರೆ ಎಲ್ಲಾ ಉಟ್ಟು ಇವರು ರೆಡಿಯಾಗುತ್ತಾರೆ. ಒಟ್ಟಿನಲ್ಲಿ ಹೊನ್ನಮ್ಮನಿಗೆ ಬಂದರು ಠಾಣೆಯೆ ಮನೆಯಾಗಿದ್ದು, ಭಾವನಾತ್ಮಕ ನಂಟು ಹೊಂದಿದ್ದಾರೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments