Tuesday, September 28, 2021
Homeಕರಾವಳಿಕಂಟೇನರ್ ಲಾರಿ - ಆಟೋ ರಿಕ್ಷಾ, ಹಿಟ್ ಅಂಡ್ ರನ್…ಚೇಸ್ ಮಾಡಿ ಲಾರಿ ಚಾಲಕನನ್ನು ಹಿಡಿದ...

ಕಂಟೇನರ್ ಲಾರಿ – ಆಟೋ ರಿಕ್ಷಾ, ಹಿಟ್ ಅಂಡ್ ರನ್…ಚೇಸ್ ಮಾಡಿ ಲಾರಿ ಚಾಲಕನನ್ನು ಹಿಡಿದ ಸ್ಥಳೀಯ ಯುವಕರು…

- Advertisement -
Renault
- Advertisement -
Home Plus
- Advertisement -

ಬೆಳ್ತಂಗಡಿ : ನಿಂತಿದ್ದ ಆಟೋ ರಿಕ್ಷಾಕ್ಕೆ ಕಂಟೇನರ್ ಗಾಡಿ ಢಿಕ್ಕಿ ಹೊಡೆದುಕೊಂಡು ಹೋದ ಘಟನೆ ನಡೆದಿದೆ. ವಾಣಿ ಶಾಲೆಯ ಬಳಿ ಬಜಾಜ್ ಆಟೋ ಬಂದು ನಿಂತಿತ್ತು. ಆಟೋಚಾಲಕ ಪಕ್ಕದ ಅಂಗಡಿಗೆ ಆಟೋ ನಿಲ್ಲಿಸಿ ತೆರಳಿದ್ದರು. ಆ ಸಂದರ್ಭ ಅತಿಯಾದ ವೇಗದಿಂದ ಧಾವಿಸಿದ ಕಂಟೇನರ್ ಗಾಡಿ ಆಟೋಗೆ ಢಿಕ್ಕಿ ಹೊಡೆದುಕೊಂಡು ಹಾಗೇ ಮುಂದೆಹೋಗಿದೆ. ಈ ಅಪಘಾತವಾದ ಕೂಡಲೇ ಸ್ಥಳೀಯ ಯುವಕರು ಬೈಕ್ ಮೂಲಕ ಗಾಡಿಯನ್ನು ಚೇಸ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಕಂಟೇನರ್ ಗಾಡಿಯು ಗುರುವಾಯನಕೆರೆ ದಾಟಿ ಮಡಂತ್ಯಾರು ತಲುಪಿಯಾಗಿತ್ತು. ಮಡಂತ್ಯಾರು ಪಕ್ಕದ ಕೊಳ್ಪೆದ ಬೈಲ್ ನಲ್ಲಿ ಸ್ಥಳೀಯರು ಲಾರಿಯನ್ನು ಅಡ್ಡಹಾಕಿದ್ದಾರೆ.
ಈಗ ಲಾರಿ ಚಾಲಕನನ್ನು ಬೆಳ್ತಂಗಡಿ ಠಾಣೆಗೆ ತಂದೊಪ್ಪಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments