- Advertisement -
ರಾಷ್ಟ್ರೀಯ ಹೆದ್ದಾರಿಯಲ್ಲಿ ಧಗ ಧಗನೆ ಹೊತ್ತಿ ಉರಿದ ಕಾರು…!!!
ಹಳೆಯಂಗಡಿಯ ಕೊಲ್ನಾಡು ಸಮೀಪ ನಡೆದ ಅವಘಡ…!!! !
ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲೊಂದು ಚಲಿಸುತ್ತಿದ್ದ ಕಾರಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಹಳೆಯಂಗಡಿಯ ಕೊಲ್ನಾಡು ಸಮೀಪ ನಡೆದಿದೆ. ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದಾನೆ. ಬೆಂಕಿ ಕಂಡು ಕಾರನ್ನು ಬದಿಗೆ ನಿಲ್ಲಿಸಿ ತಕ್ಷಣ ಕಾರಿನಿಂದ ಚಾಲಕ ಹೊರಬಂದಿದ್ದಾನೆ. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಸ್ಥಳೀಯರ ಜತೆ ಸೇರಿಕೊಂಡು ಬೆಂಕಿಯನ್ನ ನಂದಿಸಿದ್ದಾರೆ.