ಪ್ರಚೋದನಕಾರಿ ಮತ್ತು ಕೋಮು ದ್ವೇಷದ ಭಾಷಣ…!!!
ಕರಾವಳಿಯ ಹಿಂದೂ ನಾಯಕರ ಮೇಲೆ ಕೇಸ್…???
ಮಂಗಳೂರು: 25/01/2021 ರಂದು ತೊಕ್ಕೊಟ್ಟಿನ ಬಸ್ ನಿಲ್ದಾಣದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಕೋಮು ದ್ವೇಷ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಶರಣ್ ಪಂಪ್ವೆಲ್, ಭುಜಂಗ ಕುಲಾಲ್ ಮತ್ತು ಶೇಕರಾನಂದ ಸ್ವಾಮಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಉಳ್ಳಾಲ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಎಸ್.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ಕಾರ್ಯದರ್ಶಿ ಇಮ್ತಿಯಾಜ್ ಉಳ್ಳಾಲ ದೂರು ದಾಖಲಿಸಿದ್ದಾರೆ.
ಹಾಗೆಯೇ ಪಾಂಡೇಶ್ವರ ಠಾಣಾಧಿಕಾರಿಗಳಿಗೂ ಕೂಡ
ದೂರು ನೀಡಿರುವ ಸಾಮಾಜಿಕ ಹೋರಾಟಗಾರ ಎಸ್.ಡಿ.ಟಿ.ಯು ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.